We have seen many accidents occur due to disruptions in the transportation of cooking gas tankers and traffic issues. The Government of India aims to promote clean fuel and ensure that cooking gas is available 24×7 through pipelines to households. Thanks to the visionary foresight of Honorable Mr. Modi, a project that has already commenced, connecting kitchens from Dabhol in Maharashtra to Bangalore via pipelines, is extending through the Dharwad Lok Sabha constituency. Mr. Pralhad Joshi, the MP for Dharwad Lok Sabha and the Union Minister for Petroleum and Natural Gas Committee, has taken a special interest in facilitating this project, ensuring cooking gas connectivity to households in Dharwad-Hubli. Currently, 1,687 homes within the Dharwad Lok Sabha constituency area have been provided with cooking gas connections. This 723 kilometer long project has been executed at a cost of 205 crore rupees.

ಅಡುಗೆ ಅನಿಲ ಸಂಗ್ರಹಾಲಯದಿಂದ ಅಡುಗೆ ಮನೆಗೆ

ಅಡುಗೆ ಅನಿಲದ ಟ್ಯಾಂಕರಗಳ ಸಾಗಾಟದಲ್ಲಿನ ವ್ಯತ್ಯಯ ಮತ್ತು ಟ್ರಾಫಿಕ್ ತೋಂದರೆಗಳಿಂದಾಗಿ ಅನೇಕ ಅವಘಡಗಳು ಸಂಭವಿಸುವುದನ್ನು ನಾವು ನೋಡಿದ್ದೇವೆ. ಭಾರತ ಸರ್ಕಾರವು ಶುದ್ಧ ಇಂಧನವನ್ನು ಉತ್ತೇಜಿಸುವ ಮತ್ತು ಅಡುಗೆ ಮನೆಗಳಿಗೆ ದಿನದ ೨೪೭ ಅವಧಿಗೂ ಪೈಪ್ ಮೂಲಕ ಲಭ್ಯವಿರುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಮಾನ್ಯ ಶ್ರೀ ಮೋದಿಯವರ ದೂರದೃಷ್ಟಿಯ ಫಲವಾಗಿ ಈಗಾಗಲೇ ಕಾರ್ಯಗತಗೊಂಡು ಆರಂಭವಾಗಿರುವ ಮಹಾರಾಷ್ಟ್ರದ ದಾಭೋಲ್ನಿಂದ ಬೆಂಗಳೂರಿನ ವರೆಗೆ ಪೈಪ್ ಮೂಲಕ ಅಡುಗೆ ಮನೆಗಳನ್ನು ಸಂಪರ್ಕಿಸುವ ಯೋಜನೆಯು ಧಾರವಾಡ ಲೋಕಸಭಾ ಕ್ಷೇತ್ರದ ಮೂಲಕ ಸಾಗುವುದನ್ನು ಮನಗಂಡು ಶ್ರೀ ಪ್ರಲ್ಹಾದ ಜೋಶಿ ಧಾರವಾಡ ಲೋಕಸಭಾ ಸಂಸದರು ಮತ್ತು ಕೇಂದ್ರ ಸಚಿವರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅಡುಗೆ ಅನಿಲ ಸಮಿತಿಯ ಅಧ್ಯಕ್ಷರೂ ಆಗಿರುವುದರಿಂದ ಸಂಬಂಧಿಸಿದ ಸಚಿವಾಲಯದ ಮನವೊಲಿಸಿ ವಿಶೇಷ ಆಸಕ್ತಿಯಿಂದ ಧಾರವಾಡ-ಹುಬ್ಬಳ್ಳಿಯ ಅಡುಗೆ ಮನೆಗಳಿಗೆ ಅನಿಲ ಸಂಪರ್ಕ ಒದಗಿಸಿ ಅನುಕೂಕರವಾಗಿಸಿದ್ದಾರೆ. ಪ್ರಸ್ತುತ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೧೬೮೭ ಮನೆಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ಕಲ್ಪಿಸಲಾಗಿದೆ. ೭೨೩ ಕಿಲೋ ಮೀಟರ್ ಉದ್ದದ ಈ ಯೋಜನೆಗೆ ೨೦೫ ಕೋಟಿ ರೂಪಾಯಿ ವೆಚ್ಛ ಮಾಡಲಾಗಿದೆ.

Tags: