Shri. Pralhad Joshi my cabinet colleague has shown novel and unique ways as to what can be done for the nation and for it’s progress. I have all my appreciations for him.

“ಪ್ರಲ್ಹಾದ ಜೋಶಿ ನನ್ನ ಸಂಪುಟದ ಸಹೋದ್ಯೋಗಿ. ದೇಶಕ್ಕಾಗಿ, ದೇಶದ ವಿಕಾಸಕ್ಕಾಗಿ ಏನು ಮಾಡಬಹುದೆಂದು, ಯಾವ ಹೊಸ ಹೊಸ ರೀತಿಗಳಲ್ಲಿ ಕೆಲಸ ಮಾಡಬಹುದೆಂದು ತೊರಿಸಿಕೊಟ್ಟಿದ್ದಾರೆ ಅವರಿಗೆ ನಾನು ಅಭಿನಂದನೆ ವ್ಯಕ್ತಪಡಿಸುತ್ತೇನೆ.”

 

- Shri. Narendra Modi

Hon’ble Prime Minister, Govt. of India.

 

Shri. Pralhad Joshi persistently having persuaded me, got sanction for the establishment of National Forensic Science University at Dharwad.

ನಮ್ಮ ಪ್ರಲ್ಹಾದ ಜೋಶಿ ಧಾರವಾಡದಲ್ಲಿಯೇ ರಾಷ್ಟ್ರೀಯ  ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕೆಂದು ನನ್ನ ಹಿಂದೆ ಬೆನ್ನು ಬಿದ್ದು ಮಂಜೂರಿ ಮಾಡಿಸಿದ್ದಾರೆ.

- Shri. Amit Shah

Hon’ble Union Minister For Home Affairs And Co-operative, Govt. Of India.

 

“Clearing all the setbacks prevailing in the energy sector for the past several decades and by providing equal opportunities to everyone working in the coal sector, Shri Pralhad Joshi has made important contributions towards the safety and production of coal in the country. For this, I appreciate the work of Shri Pralhad Joshi, Union Minister of Parliamentary Affairs, Coal, and Mines.”

ಇಂಧನ ಕ್ಷೇತ್ರದಲ್ಲಿ ಹಿಂದಿನ ಹಲವಾರು ದಶಕಗಳಿಂದ ಇದ್ದ ತೊಂದರೆಗಳನ್ನು ನಿವಾರಿಸಿ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ್ದರಿಂದ ದೇಶದ ಸುರಕ್ಷತೆ ಮತ್ತು ಕಲ್ಲಿದ್ದಲು ಉತ್ಪಾದನೆಯಲ್ಲಿ ಅವರು ತಮ್ಮ ಮಹತ್ವಪೂರ್ಣ ಕೊಡುಗೆಯನ್ನು ನೀಡುತ್ತಿದ್ದಾರೆ, ಅದಕ್ಕಾಗಿ ಕಲ್ಲಿದ್ದಲು ಮತ್ತು ಗಣಿ ಇಲಾಖೆಯ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿಯವರ ಕಾರ್ಯವನ್ನು ನಾನು ಶ್ಲಾಘಿಸುತ್ತೇನೆ.

- Shri. Rajanath Singh

Hon’ble Union Minister For Defence, Govt. of India.

 

“My dear friend Shri Pralhad Joshi is an extremely proactive colleague among the Cabinet Ministers. In addition to shouldering the responsibility for the smooth conduct of parliamentary affairs, he oversees the development works of the Department until midnight and greets the following day with the same smiling face.”

ಶ್ರೀ ಪ್ರಲ್ಹಾದ ಜೋಶಿ ನನ್ನ ಆತ್ಮೀಯ ಗೆಳೆಯ, ಸಚಿವ ಸಂಪುಟದ ಅತ್ಯಂತ ಕ್ರಿಯಾಶೀಲ ಸಹೋದ್ಯೋಗಿ ಸಂಸತ್ತಿನ ಸುಲಲಿತ ಕಾರ್ಯನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡು ಜೊತೆಗೆ ಇಲಾಖೆಯ ಅಭಿವೃದ್ಧಿ ಕೆಲಸಗಳನ್ನು ಮಧ್ಯರಾತ್ರಿಯವರೆಗೂ ನಿರ್ವಹಿಸಿ ಬೆಳಿಗ್ಗೆ ಅದೇ ನಗುವಿನೊಂದಿಗೆ ಇದಿರುಗೊಳ್ಳುವ ಹಸನ್ಮುಖಿ.

- Shri. Piyush Goel

Hon’ble Union Minister For, Textile, Customer Affairs, Food and Public Distribution, Commerce and Industry, Govt Of India

 

“Due to the relentless efforts of Shri Prahalad Joshi, the stone-laying ceremony for the construction of highways in Karnataka is being initiated. Officials from my department are ready to commence work following Shri Prahalad Joshi’s visits to my department and my residence, approximately 25 times, as well as his efforts in securing the sanction for the Hubballi-Dharwad Bypass Road, the Hubballi-Chitradurga highway, and the construction of overbridges.”

ಶ್ರೀ ಪ್ರಲ್ಹಾದ ಜೋಶಿಯವರ ನಿರಂತರ ಪ್ರಯತ್ನದಿಂದಾಗಿ ಕರ್ನಾಟಕದ ಹೆದ್ದಾರಿಗಳ ಭೂಮಿ ಪೂಜೆಯಾಗುತ್ತಿದೆ. ನನ್ನ ಇಲಾಖೆಯ ಅಧಿಕಾರಿಗಳು ತಯಾರಿರದಿದ್ದರೂ ನನ್ನನ್ನು ಕಾಣಲು ಸುಮಾರು ೨೫ ಬಾರಿ ಕಛೇರಿಗೆ ಮತ್ತು ನಮ್ಮ ಮನೆಗೆ ಬಂದದ್ದಲ್ಲದೆ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ, ಹುಬ್ಬಳ್ಳಿ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ, ರಸ್ತೆ, ಮೇಲ್ಸೆತುವೆಗಳನ್ನು ಮಂಜೂರಿ ಮಾಡಿಸಿದ್ದಾರೆ.

- Shri. Nitin Gadakari

Hon’ble Union Minister for Central Highways and Road Transport, Govt. of India.

 

“While leading the Department of Foreign Affairs, I have been amazed to witness the discipline and work ethic in Shri Pralhad Joshi concerning National and Parliamentary affairs.”

ವಿದೇಶಾಂಗ ಇಲಾಖೆಯನ್ನು ಮುನ್ನೆಡೆಸುವ ನಾನು ದೇಶೀಯ ಮತ್ತು ಸಂಸದೀಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮುನ್ನೆಡೆಸುವ ಕ್ರಿಯಾಶೀಲತೆಯನ್ನು ಶ್ರೀ ಪ್ರಲ್ಹಾದ ಜೋಶಿ ಅವರಲ್ಲಿ ಬೆರಗಿನಿಂದ ನೋಡಿದ್ದೇನೆ.

- Shri. S. Jaishankar

Hon’ble Union Minister for Foreign Affairs, Govt. of India.

 

“My brother, Shri Pralhad Joshi, instantly responds to any doubts and problems we present to him regarding parliamentary affairs. He has a mercurial and distinctly imitable personality.” 

ನನ್ನ ಸಹೋದರ ಶ್ರೀ ಪ್ರಲ್ಹಾದ ಜೋಶಿಯವರು ಸಂಸದೀಯ ವಿಷಯಗಳಿಗೆ ಸಂಬಂಧಿಸಿದ ಸಂದೇಹ ಮತ್ತು ಸಮಸ್ಯೆಗಳಿಗೆ ಕ್ಷಣಮಾತ್ರದಲ್ಲಿ ಸ್ಪಂದಿಸುವ ಪಾದರಸದಂತಹ ಅನುಕರಣೀಯ ವ್ಯಕ್ತಿತ್ವದವರಾಗಿದ್ದಾರೆ.

- Smt. Smriti Irani

Hon’able Union Minister, for Women and Child Development and Minority Bussiness, Govt. of India.

 

“Life is an art, and it can only be learned from those who have mastered this skill. It is quite different from becoming an IAS Officer through competitive examinations to becoming a member of parliament by participating in general elections. Shri Pralhad Joshi, my guru, has taught me how to conduct oneself in the house, when to speak and when not to, and additionally, how and in what way to respond to opponents.” 

ಶ್ರೀ ಪ್ರಲ್ಹಾದ ಜೋಶಿ ಜೀ ನನ್ನ ಗುರುಗಳು, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಐ.ಎ.ಎಸ್ ಆಗುವುದೇ ಬೇರೆ, ಚುನಾವಣೆ ಎದುರಿಸಿ ಸಂಸದನಾಗುವುದೆ ಬೇರೆ, ಸಂಸತ್ತಿನಲ್ಲಿ ಹೇಗಿರಬೇಕು, ಯಾವಾಗ ಮಾತನಾಡಬೇಕು, ಯಾವಾಗ ಮಾತನಾಡಬಾರದು ಅಲ್ಲದೆ ರೋಧಿಸುವವರಿಗೆ ಹೇಗೆ ಮತ್ತು ಯಾವ ರೀತಿ ಉತ್ತರಿಸಬೇಕೆಂದು ನಮಗೆ ಕಲಿಸಿಕೊಟ್ಟಿದ್ದಾರೆ.

- Shri. Ashwini Vaishnav

Hon’ble Union Minister, for Communication and Railways, Govt. of India.

 

“Shri Pralhad Joshi, a committed BJP Party volunteer and a disciplinarian, has been actively discharging his responsibilities in Shri Narendra Modi government as the Union Minister for Parliamentary Affairs, Coal, and Mines. During his tenure, the functioning system of the Department of Parliamentary Affairs has been moving in the direction of development and reformation. When we consider the significant flow of Central Government financial assistance and contributions through several projects towards the development of Karnataka State, the role of Shri Pralhad Joshi is of great significance. It was a prime performance by Shri Pralhad Joshi, espousing the cause of our state before the Central Government during the period of the Covid epidemic crisis, acting as the only connecting bridge between the centre and the state in successfully handling the critical situation. It may not be an exaggeration to say that with Shri Pralhad Joshi assuming the role of a member of parliament, the developmental activities gained momentum, relating to both Hubballi-Dharwad Municipal Corporation and that of Dharwad parliamentary constituency. The footprints left behind by Shri Joshi in relation to his public service, activism in building the party, and the work efficiency displayed by him in acquitting himself well as a public servant will always be remembered.”

ಬಿಜೆಪಿ ಪಕ್ಷದ ನಿಷ್ಠೆ, ಶಿಸ್ತಿನ ಕಟ್ಟಾಳುವಾದ ಪ್ರಲ್ಹಾದ ಜೋಶಿಯವರು ಮೋದಿಯವರ ಕೇಂದ್ರ ಸಂಪುಟದಲ್ಲಿ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆಯ ಸಚಿವರಾಗಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸಂಸದೀಯ ಸಚಿವಾಲಯದ ಕಾರ್ಯಶೈಲಿ ಜೋಶಿಯವರ ಅವಧಿಯಲ್ಲಿ ಸುಧಾರಣೆ ಹಾಗೂ ಅಭಿವೃದ್ಧಿಯತ್ತ ಮಹತ್ವದ ಹೆಜ್ಜೆ ಇಡುತ್ತಿದೆ, ರಾಜ್ಯದ ಅಭಿವೃದ್ಧಿಗೆ ಕೇಂದ್ರದಿAದ ಹರಿದು ಬಂದಿರುವ ಯೋಜನೆ ಹಾಗೂ ಕೊಡುಗೆಗಳ ಹಿನ್ನಲೆಯಲ್ಲಿ ಜೋಶಿಯವರ ಪಾತ್ರ ಗಮನಾರ್ಹವಾದುದು, ಕರೋನಾ ಸಂಕಷ್ಟ ಕಾಲದಲ್ಲಿ ರಾಜ್ಯದ ಕೋರಿಕೆಗಳಿಗೆ ಕೇಂದ್ರ ಸ್ಪಂದಿಸುವಲ್ಲಿ ಸಂಪರ್ಕ ಸೇತುವೆಯಾಗಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲು ಕೆಲಸ ಮಾಡಿದ ಪರಿ ಅನನ್ಯವಾದುದು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಬಂದಿದ್ದೇ ಇವರು ಲೋಕಸಭಾ ಸದಸ್ಯರಾದ ನಂತರ ಅಂದರೆ ತಪ್ಪಾಗಲಾರದು. ಜೋಶಿ ಅವರ ಸಾರ್ವಜನಿಕ ಬದುಕಿನ ಹೆಜ್ಜೆ ಗುರುತುಗಳು ಪಕ್ಷ ಕಟ್ಟುವಲ್ಲಿನ ಕ್ರಿಯಾಶೀಲತೆ ಹಾಗೂ ಸರ್ಕಾರದ ಜವಾಬ್ದಾರಿಗಳಲ್ಲಿ ನಿರ್ವಹಿಸಿದ ಕಾರ್ಯಕ್ಷಮತೆ ಸರ್ವಕಾಲಕ್ಕೂ ನೆನಪಿನಲ್ಲಿ ಉಳಿಯುವಂತದ್ದು. 

-Shri. B. S. Yedurappa

Hon’ble Ex. Chief Minister, Govt. Of Karnataka And Member Of BJP Central Parliamentary Committee

 

“Under the dynamic leadership of Shri Narendra Modi government, Shri Pralhad Joshi, as the Union Minister for Parliamentary Affairs, Coal, and Mines, has been performing exceptionally well, bringing laurels to our Karnataka State and becoming a role model for the younger generation. Shri Pralhad Joshi, as the president of the BJP State unit, demonstrated excellent organizing skills and a commitment to transforming concepts into reality. His keen interest in national issues, relentless efforts, activism in strengthening the party, and professional wisdom in discharging his responsibilities are milestones and indelible footprints explicitly imprinted on the path of the party’s progress. He was among the first to advocate for the cause of the National flag. Despite being a Union Minister, Shri Pralhad Joshi shows utmost concern towards safeguarding the interests and development of the state, clearly demonstrating his special care for the state and his capable representation of it at the national level.”

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಕರ್ನಾಟಕಕ್ಕೆ ಹೆಗ್ಗಳಿಕೆಯನ್ನು ತರುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನ್ಯ ಶ್ರೀ ಪ್ರಹ್ಲಾದ್ ಜೋಶಿ ಅವರು ಕಾರ್ಯಕರ್ತರಿಗೆ ಸದಾ ಮಾದರಿಯಾಗಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅತ್ಯಂತ ಕ್ರಿಯಾಶೀಲವಾಗಿ ಕರ್ನಾಟಕದಲ್ಲಿ ಪಕ್ಷವನ್ನು ಮುನ್ನಡೆಸಿದ್ದ ಅವರ ಸಂಘಟನೆ ಹಾಗೂ ಪಕ್ಷ ಕಟ್ಟುವಲ್ಲಿನ ಜವಾಬ್ದಾರಿ ನಿರ್ವಹಣೆಯ ಹೆಜ್ಜೆಗಳು ಸಂಘಟನೆಯ ಹಾದಿಯಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳಾಗಿವೆ. ಅವರ ರಾಷ್ಟ್ರಧ್ವಜ ಹೋರಾಟ ಹಾಗೂ ರಾಷ್ಟ್ರೀಯ ವಿಚಾರಗಳಿಗೆ ಅವರು ಆಯೋಜಿಸಿದ ಕಾರ್ಯಕ್ರಮಗಳು ಬಿಜೆಪಿ ನಡೆದು ಬಂದ ಹಾದಿಯಲ್ಲಿ ಬಿಜೆಪಿ ನಡೆದುಬಂದ ಹಾದಿಯಲ್ಲಿ ದಾಖಲೆಗಳಾಗಿ ಉಳಿದಿವೆ. ಕೇಂದ್ರ ಸಚಿವರಾಗಿ ಕರ್ನಾಟಕ ರಾಜ್ಯದ ಹಿತಾಸಕ್ತಿಯನ್ನು ವಿಶೇಷವಾಗಿ ಗಮನಿಸುವ ಮಾನ್ಯ ಜೋಶಿಯವರು ರಾಜ್ಯವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿರುವುದು ಅವರ ನಾಡ ಬಗೆಗಿರುವ ಕಾಳಜಿಯನ್ನು ಸಾಕ್ಷೀಕರಿಸುತ್ತದೆ. 

-Shri. Vijayendra Yediyurappa

Hon’ble President, BJP Karnataka State.