Tel: +91 0836 2251055
14 APRIL 2024
ಸಂವಿಧಾನ ಶಿಲ್ಪಿಗೆ ನಮೋ ನಮಃ
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಇಂದು ಹುಬ್ಬಳ್ಳಿಯ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವದ ಪ್ರಣಾಮ ಸಲ್ಲಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.
ಅಂಬೇಡ್ಕರ್ ಅವರ ಜೀವನವೇ ನಮಗೆಲ್ಲರಿಗೂ ಇಂದಿಗೂ ಆದರ್ಶಪ್ರಾಯ. ದೇಶದ ಸುರಕ್ಷತೆ ಮತ್ತು ದೇಶವಾಸಿಗಳ ಹಿತಚಿಂತನೆಗಾಗಿ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ನೀಡಿರುವುದು ರಾಷ್ಟ್ರ ಎಂದಿಗೂ ಮರೆಯಲಾಗದ ಕೊಡುಗೆ. ಇಂದು ನಾವೆಲ್ಲರೂ ಸಮಾಜದಲ್ಲಿ ಸಮಾನರಾಗಿ ಇರುವುದಕ್ಕೆ ಸಂವಿಧಾನವೇ ಮೂಲಕಾರಣ. ಅಂಬೇಡ್ಕರ್ ಅವರು ನಮ್ಮೆಲ್ಲರ ಮನಸ್ಸಿನಲ್ಲಿ ಎಂದಿಗೂ ಅಜರಾಮರ.
ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ Mahesh Tenginkai , ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಪಕ್ಷದ ಪ್ರಮುಖರಾದ ಶ್ರೀ ಮಹೇಂದ್ರ ಕೌತಾಳ, ಮಾಜಿ ಶಾಸಕರಾದ ಶ್ರೀ ಅಶೋಕ ಕಾಟವೆ, ಶ್ರೀ ಬಸವರಾಜ್ ಅಮ್ಮಿನಬಾವಿ ಹಾಗೂ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.