The fond memories of our school, which imparted primary education, will last throughout our lives. The reminiscence of our childhood spent in classrooms and playgrounds always lingers in our minds.

Despite the basic facilities provided for the school by the Govt., the task of enhancing the beauty of the school remains unfulfilled. With this in mind, the “Our Colour- Your Service” campaign to apply paint to school buildings has been initiated in our Dharwad parliamentary constituency.

There is a positive and overwhelming response from the former students and village panchayat of the respective schools. It is with pride to note that the campaign is marching with great success.

Shri. Narendra Modi different programmes and schemes are the source of inspiration for our campaign.

ಬಣ್ಣದರ್ಪಣೆ

ಅಕ್ಷರ ಕಲಿತ ನಮ್ಮ ಶಾಲಾ ಜೀವನದ ಕ್ಷಣಗಳ ಕೊನೆ ಘಳಿಗೆ ತನಕ ನೆನಪಿನಲ್ಲಿ ಇರುವಂತದ್ದು, ಪಾಠ ಕಲಿತು ಆಟ ಆಡಿದ ನಮ್ಮ ಶಾಲೆಯ ತರಗತಿ, ಆಟದ ಮೈದಾನ ಎಲ್ಲವೂ ಸುಂದರ. ಸರ್ಕಾರಗಳು ಮೂಲಸೌಕರ್ಯ ಯೋಜನೆಗಳನ್ನು ನೀಡಿದರೂ ಸಂಪೂರ್ಣ ಶಾಲೆಗಳ ಅಂದ ಚೆಂದವನ್ನು ಇಮ್ಮಡಿಗೊಳಿಸುವ ಕಾರ್ಯ ಯೋಜನೆಗಳು ಇಲ್ಲದಿರುವುದನ್ನು ಗಮನಿಸಿ ನಾವು ಕಲಿತ ಸರ್ಕಾರಿ ಶಾಲೆಗಳ ಗೋಡೆಗಳಿಗೆ ಬಣ್ಣ ಹಚ್ಚುವ ವಿನೂತನ “ಬಣ್ಣದರ್ಪಣೆ” ಅಭಿಯಾನವನ್ನು ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ.

“ಬಣ್ಣ ನಮ್ಮದು – ಸೇವೆ ನಿಮ್ಮದು” ಎಂಬ ಅಡಿಬರಹದಲ್ಲಿ ಶುರುವಾದ ಅಭಿಯಾನಕ್ಕೆ ಸರ್ಕಾರಿ ಶಾಲೆಗಳಲ್ಲಿ ಕಲಿತ ಹಳೆಯ ವಿಧ್ಯಾರ್ಥಿಗಳು, ಆಯಾ ಗ್ರಾಮದ ಸಂಘ ಸಂಸ್ಥೆಗಳು ಮುಂದೆ ಬಂದು ಈ ಅಭಿಯಾನವನ್ನು ಯಶ್ವಸಿಯಾಗಿ ಮುನ್ನೆಡೆಸುತ್ತಿರುವುದು ಹೆಮ್ಮೆಯ ವಿಷಯ.

ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ೬೦೦ ಕ್ಕೂ ಹೆಚ್ಚಿನ ಸರ್ಕಾರಿ ಶಾಲೆ, ಕಾಲೇಜುಗಳ ಅಂದವನ್ನು ಬಣ್ಣದರ್ಪಣೆ ಅಭಿಯಾನದಡಿ ಹೆಚ್ಚಿಸಲಾಗಿದೆ.

Tags: