Tel: +91 0836 2251055
30 APRIL 2024
ಇಂದು ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಸತ್ತೂರಿನಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರಾರ್ಥ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು. ಸರ್ವ ವರ್ಗದ ಜನರ ಏಳಿಗೆಗಾಗಿ ಭೇದ ಭಾವವಿಲ್ಲದೇ ಶ್ರಮಿಸುತ್ತಿರುವ ಪ್ರಧಾನಿ ಶ್ರೀ Narendra Modi ಅವರು. ಬಡತನ ನಿರ್ಮೂಲನೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದಲ್ಲದೆ, ಆ ಯೋಜನೆಗಳ ಅರಿವು ದೇಶದ ಮೂಲೆಮೂಲೆಗೂ ತಲುಪಲೆಂದು ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಕೈಗೊಂಡು ದೇಶದ ಉದ್ದಗಲದ ಭಾರತೀಯರಿಗೆ ಮುಟ್ಟುವಂತೆ ಮಾಡಿದರು. ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ಚಿಕಿತ್ಸೆ ಹಾಗೂ ಔಷಧಗಳನ್ನು ಒದಗಿಸುವ ಆಯುಷ್ಮಾನ್ ಭಾರತ್ ಯೋಜನೆಯಡಿ ಕೋಟ್ಯಾಂತರ ಭಾರತೀಯರು ನೋಂದಣಿ ಮಾಡಿಸಿಕೊಂಡಿದ್ದಾರಲ್ಲದೇ ಅದರ ಸದುಪಯೋಗವನ್ನು ಪಡೆಯುತ್ತಿದ್ದಾರೆ. ಇಂತಹ ನಿಷ್ಕಲ್ಮಶ ನಾಯಕ ಮತ್ತೆ ನಮ್ಮ ಪ್ರಧಾನಿಯಾಗಬೇಕು. ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಬೇಕೆಂದು ಕ್ಷೇತ್ರದ ಜನತೆ ಒಮ್ಮತದಿಂದ ಕೂಗಿ ಕೂಗಿ ಸಾರಿದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ Arvind Bellad , ಪ್ರಮುಖರಾದ ಶ್ರೀ ಬಸವರಾಜ ಗರಗ, ಶ್ರೀಮತಿ ನೀಲವ್ವ ಅರವಳದ, ಶಿವಣ್ಣ ಬಡವಣ್ಣನವರ, ಶ್ರೀಮತಿ ಮಂಜುಳಾ ಸಾಕರೆ, ಶ್ರೀ ಪುಂಡಲಿಕ ತಳವಾರ, ಶ್ರೀ ಮೈಲಾರ ಉಪ್ಪಿನ, ಶ್ರೀ ಮಾರುತಿ ಇಂಗನಳ್ಳಿ, ಶಂಕ್ರಣ್ಣ ನವಲೂರು, ಶ್ರೀಮತಿ ಮಾಲತಿ ಹುಲಿಕಟ್ಟಿ ಹಾಗೂ ಪಕ್ಷದ ಪ್ರಮುಖರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.