14 APRIL 2024

ಹುಬ್ಬಳ್ಳಿಯಲ್ಲಿ ಇಂದು ನಡೆದ ರೈತ ಉತ್ಪಾದಕ ಸಂಸ್ಥೆಗಳ ಪ್ರಮುಖರು ಮತ್ತು ಪ್ರಗತಿಪರ ರೈತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು.

ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರ ಸದಾ ರೈತಪರವಾಗಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತ ಕುಟುಂಬಗಳಿಗೆ ವಾರ್ಷಿಕವಾಗಿ ಕನಿಷ್ಠ ರೂ. 6000 ಆರ್ಥಿಕ ಬೆಂಬಲ ನೀಡಲಾಗುತ್ತಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಅಧಿಕ ರೈತರು ರೂ. 447 ಕೋಟಿಗೂ ಹೆಚ್ಚಿನ ಆರ್ಥಿಕ ನೆರವು ಪಡೆದಿದ್ದಾರೆ. ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಇದುವರೆಗೂ ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದ 5735 ರೈತರು ರೂ. 5.99 ಕೋಟಿಗೂ ಹೆಚ್ಚಿನ ನೆರವನ್ನು ಪಡೆದಿದ್ದಾರೆ. ಇದರಂತೆಯೇ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್, ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರಾಷ್ಟ್ರೀಯ ಕೃಷಿ ವಿಸ್ತರಣೆ ಹಾಗೂ ಯಾಂತ್ರೀಕರಣ ಉಪ ಅಭಿಯಾನಗಳಂತಹ ಯೋಜನೆಗಳು ನಮ್ಮ ಧಾರವಾಡ ಲೋಕಸಭಾ ಕ್ಷೇತ್ರ ಸೇರಿದಂತೆ ದೇಶದೆಲ್ಲೆಡೆ ನಮ್ಮ ರೈತರು ಅಭಿವೃದ್ಧಿಯನ್ನು ಕಾಣುವಂತೆ ಮಾಡಿದೆ. ಈ ಅಬಿವೃದ್ಧಿ ಮುಂದುವರೆಯಲು ಬಿಜೆಪಿಯನ್ನು ಬಹುಮತದಿಂದ ಗೆಲ್ಲಬೇಕಿದೆ. ಅದಕ್ಕೆ ನಮ್ಮ ರೈತ ಕುಟುಂಬಗಳ ಬೆಂಬಲ ಬೇಕಿದೆ ಎಂದು ಮನದಟ್ಟು ಮಾಡಿದೆನು.

ಈ ಸಭೆಯಲ್ಲಿ ಶಾಸಕರಾದ ಶ್ರೀ Mahesh Tenginkai , ಜಿಲ್ಲಾಧ್ಯಕ್ಷರಾದ ಶ್ರೀ ನಿಂಗಪ್ಪ ಸುತಗಟ್ಟಿ, ರೈತ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಂಭುಕುಮಾರ, ರೈತ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಎ ಎಸ್ ಪಾಟೀಲ ನಡಹಳ್ಳಿ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ನವೀನಕುಮಾರ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಆರ್. ಎಸ್. ಪಾಟೀಲ, ಪಕ್ಷದ ಪ್ರಮುಖರಾದ ಶ್ರೀ ಬಸವರಾಜ್ ಕುಂದಗೋಳಮಠ, ಶ್ರೀ ಶಶಿಮೌಳಿ ಕುಲಕರ್ಣಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: