Tel: +91 0836 2251055
30 APRIL 2024
ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ವಾಯು ವಿಹಾರಕ್ಕೆ ಎಂದು ತೆರಳಿದ್ದ ಜನಸಾಮಾನ್ಯರನ್ನು ಭೇಟಿಯಾಗಿ ಇಂದು ಬೆಳಿಗ್ಗೆ ಪ್ರಚಾರ ನಡೆಸಲಾಯಿತು. ಭಾರತದ ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸುವುದರೊಳಗೆ ಭಾರತವನ್ನು ವಿಶ್ವಗುರುವನ್ನಾಗಿಸುವುದು ಮೋದಿಯವರ ಸಂಕಲ್ಪ. ಈ ಸಂಕಲ್ಪದಡೆಗೆ ವೇಗವಾಗಿ ದಿಟ್ಟ ಹೆಜ್ಜೆಗಳನ್ನು ಇಡುತ್ತಿರುವುದಕ್ಕೆ ಸಾಕ್ಷಿ ಕಳೆದ ಹತ್ತು ವರ್ಷದ ಆಡಳಿತ. ನಾವೆಲ್ಲರೂ ಸೇರಿ ಭಾರತವನ್ನು ವಿಶ್ವಗುರುವನ್ನಾಗಿಸೋಣ ಈ ಕಾರ್ಯದ ಸಾರಥ್ಯವನ್ನು ಪ್ರಧಾನಿ ಶ್ರೀ Narendra Modi ಅವರ ಕೈಗೆ ನೀಡೋಣವೆಂದು, ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸೋಣವೆಂದು ಸಂಕಲ್ಪ ಮಾಡಿದೆವು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ Mahesh Tenginkai , ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ವೀರಣ್ಣ ಸವಡಿ, ಶ್ರೀ ಸಂತೋಷ ಚೌಹಾನ್, ಶ್ರೀಮತಿ ರೂಪಾ.ಡಿ.ಶೆಟ್ಟಿ, ಶ್ರೀ ಚನ್ನು ಹೊಸಮನಿ, ಶ್ರೀ ಸಿದ್ದು ಮೊಗಳಿಶೆಟ್ಟರ್, ಶ್ರೀ ಶಿವಯ್ಯ ಹಿರೇಮಠ, ಶ್ರೀ ಈಶ್ವರ್ ಗೌಡ ಪಾಟೀಲ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.