Tel: +91 0836 2251055
• ನಮ್ಮ ಶ್ರೀ ನರೇಂದ್ರ ಮೋದಿಜಿಯವರ ಸರ್ಕಾರದ2014 ರಿಂದ 2021 ರವರೆಗಿನ ಅವಧಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರಸ್ತೆಜಾಲ ನಿರ್ಮಾಣಕ್ಕೆ ಒಟ್ಟು 8,300 ಕೋಟಿರೂ. ಗಳ ಬೃಹತ್ ಅನುದಾನದಲ್ಲಿ ನಿರ್ಮಿಸಲಾದ ರಸ್ತೆಗಳನ್ನು ಲೋಕಾರ್ಪಣೆ ಮಾಡಿದ್ದು ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಲಿದೆ.
• ಶಿಗ್ಗಾಂವ-ಸವಣೂರ ವಿಧಾನಸಭಾಕ್ಷೇತ್ರದ 39 ರಸ್ತೆಗಳ ಸುಧಾರಣೆಗಾಗಿ 30 ಕೋಟಿರೂ. ಅನುದಾನವನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಬಿಡುಗಡೆ ಮಾಡಲಾಗಿದೆ.
• ಹುಬ್ಬಳ್ಳಿ-ಧಾರವಾಡ ಮಧ್ಯದ 31 ಕಿ. ಮೀ. ಬೈಪಾಸ್ ರಸ್ತೆಯನ್ನು ಷಟ್ ಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ ಮತ್ತು ನಾಲ್ಕು ಪಥದ ಸರ್ವಿಸ್ ರಸ್ತೆಯ ನಿರ್ಮಾಣವನ್ನು ಕೂಡಾ ಮಾಡಲಾಗುವುದು. ಇದಕ್ಕಾಗಿ 1,050 ಕೋಟಿರೂ. ಬಿಡುಗಡೆ ಮಾಡಲಾಗಿದೆ.
• ರೂ 2227 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿಯಿಂದ ಹೊಸಪೇಟೆ ವರೆಗಿನ ರಾಷ್ಟ್ರೀಯ ಹೆದ್ದಾರಿ-63 ನ್ನು ದ್ವೀಪಥದಿಂದ ಚತುಷ್ಪತರಸ್ತೆಯನ್ನಾಗಿ ಪರಿವರ್ತಿಸಲಾಗಿದೆ.
• ಹುಬ್ಬಳ್ಳಿ-ಹಾವೇರಿ 63 ಕಿ.ಮೀ. ಉದ್ದದ ಷಟ್‍ಪಥ ರಸ್ತೆಯನ್ನು 1,937 ಕೊಟಿರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.
• ಕೇಂದ್ರರಸ್ತೆ ನಿಧಿಯಡಿ (ಸಿಆರ್‍ಎಫ್) 616.52 ಕೋಟಿಯಲ್ಲಿ ರಸ್ತೆಗಳ ಅಭಿವೃದ್ಧಿ ಪ್ರಗತಿಯಲ್ಲಿವೆ. ಈಗಾಗಲೇ 103 ಕಿಮಿ ರಸ್ತೆ ನಿರ್ಮಿಸಲಾಗಿದೆ.
• ಪ್ರಧಾನಮಂತ್ರಿಗ್ರಾಮಸಡಕ್‍ಯೋಜನೆ 1ರಡಿ 58.47 ಕಿಮಿ ರಸ್ತೆ ನಿರ್ಮಾಣ.
• ಪ್ರಧಾನಮಂತ್ರಿಗ್ರಾಮಸಡಕ್‍ಯೋಜನೆ 2ರಡಿ 163ಕಿಮಿ ರಸ್ತೆ ನಿರ್ಮಾಣ.
• ಪ್ರಧಾನಮಂತ್ರಿಗ್ರಾಮಸಡಕ್‍ಯೋಜನೆ 3ರಡಿ 49.38 ಕೋಟಿ ವೆಚ್ಚದಲ್ಲಿ 91.49ಕಿಮಿ ರಸ್ತೆ ನಿರ್ಮಾಣ.
Leave a Comment