Tel: +91 0836 2251055
4 MAY 2024
ಇಂದು ವಿ ಆರ್ ಎಲ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಮಾಜಿ ಸಂಸದರಾದ ಶ್ರೀ ವಿಜಯ್ ಸಂಕೇಶ್ವರ್ ಅವರ ಉಪಸ್ಥಿತಿಯಲ್ಲಿ ವಿ ಆರ್ ಎಲ್ ಸಂಸ್ಥೆಯ ಸಿಬ್ಬಂದಿ ವರ್ಗದೊಂದಿಗೆ ಸಭೆ ನಡೆಸಿ ಮತ ಯಾಚಿಸಿದೆನು. ದೇಶದ ಬೆಳವಣಿಗೆಯಲ್ಲಿ ಕಾರ್ಮಿಕ ವರ್ಗದ ಶ್ರಮ ಅಪಾರ ಹಾಗಾಗಿ ಶ್ರೀ Narendra Modi ಅವರು ಈ ದೇಶದ ಕಾರ್ಮಿಕ ವರ್ಗಕ್ಕೆ ಸರ್ಕಾರದ ಯೋಜನೆಗಳ ಮೂಲಕ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಕಾರ್ಮಿಕ ವರ್ಗದ ಶ್ರೇಯಸ್ಸಿಗಾಗಿ ಮೋದಿ ಸರ್ಕಾರ ಸದಾ ಬದ್ಧ. ಮುಂದೆಯೂ ದೇಶದ ಕಾರ್ಮಿಕ ವರ್ಗ ಸುಖಕರ ಜೀವನ ನಡೆಸಬೇಕಾದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಪ್ರಚಂಡ ದಿಗ್ವಿಜಯದಿಂದ ಗೆಲ್ಲಬೇಕು ಎಂದು ಬೆಂಬಲ ಕೋರಿದೆನು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ M R Patil ಹಾಗೂ ವಿ ಆರ್ ಎಲ್ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.