Tel: +91 0836 2251055
13 APRIL 2024
ಗಳಗಿ – ಹುಲಕೊಪ್ಪ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ದುಮ್ಮವಾಡದಲ್ಲಿ ಇಂದು ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದೆನು.
ಯುಪಿಎ 10 ವರ್ಷದ ಆಡಳಿತದಲ್ಲಿ ಎಲ್ಲ ವಿಧದ ಹಗರಣಗಳನ್ನು ಮಾಡಿ ದೇಶವನ್ನು ದುರ್ಬಲಗೊಳಿಸಿಬಿಟ್ಟಿದ್ದರು. 2014 ನಂತರ Narendra Modi ಅವರು ಅಧಿಕಾರಕ್ಕೆ ಬಂದಮೇಲೆ ಭಾರತ ಈಗ ಜಗತ್ತಿನ 5 ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಭಾರತ 3 ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಇದುವರೆಗೂ ಕಂಡಿರುವ ಭಾರತ ಏಳಿಗೆ ಬರೀ ಟ್ರೈಲರ್ ಅಷ್ಟೇ. ಮೋದಿಯವರು ಮುಂದಿನ ದಿನ ನೀವು ನೋಡೋಕೆ ಬಾಕಿ ಇರೋದು ಭವ್ಯ ಭಾರತದ ನನಸು. ಅದಕ್ಕೇ ಈ ಬಾರಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಭವ್ಯ ಭಾರತದ ನಿರ್ಮಾಣಕ್ಕೆ ಕಾರಣಕರ್ತೃಗಳಾಗೋಣ ಎಂದು ಕೋರಿಕೊಂಡೆನು.
ಈ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ Pradeep Shettar , ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ Nagaraj Chebbi , ಜಿಲ್ಲಾಧ್ಯಕ್ಷರಾದ ಶ್ರೀ ನಿಂಗಪ್ಪ ಸುತಗಟ್ಟಿ, ಶ್ರೀ ಶಶೀಧರ ನಿಂಬಣ್ಣವರ, ಪಕ್ಷದ ಪ್ರಮುಖರಾದ ಶ್ರೀ ಐ ಸಿ ಗೋಕುಲ, ಶ್ರೀ ಈರಣ್ಣ ಜಡಿ, ಶ್ರೀ ಬಸವರಾಜ ಶೇರೆವಾಡ, ಶ್ರೀ ಕಲ್ಮೇಶ ಬೇಲೂರ, ಶ್ರೀ ವೈ.ಎನ್ ಪಾಟೀಲ, ಶ್ರೀ ಜಯಪಾಲ ಬೆಟದೂರು, ಶ್ರೀ ಶಿವಲಿಂಗಪ್ಪ, ಶ್ರೀ ಸದಾನಂದ ಚಿಂತಾಮಣಿ, ಶ್ರೀ ಮಹಾಂತೇಶ ತಹಶೀಲ್ದಾರ, ಶ್ರೀ ಶಂಕ್ರಣ್ಣ ಗಂಬ್ಯಾಪೂರ ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.