Tel: +91 0836 2251055
14 March 2024
“ಏಕ್ ಭಾರತ್ ಶ್ರೇಷ್ಠ ಭಾರತ್”
ಭಾರತೀಯ ಜನತಾ ಪಕ್ಷ ಧಾರವಾಡ ಲೋಕಸಭಾ ಕ್ಷೇತ್ರದ ಹಿಂದುಳಿದ ವರ್ಗಗಳ ಸಾಮಾಜಿಕ ಸಮ್ಮೇಳನದಲ್ಲಿ ಭಾಗವಹಿಸಿ, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆನು.
ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದಲ್ಲಿ ದೇಶಾದ್ಯಂತ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಪರಿಕಲ್ಪನೆಯಂತೆ ಏಕ್ ಭಾರತ್ ಶ್ರೇಷ್ಠ ಭಾರತ್ ಧ್ಯೇಯ ವಾಕ್ಯದೊಂದಿಗೆ ನೂರಾರು ಯೋಜನೆಗಳ ಮೂಲಕ ಹಿಂದುಳಿದ ವರ್ಗಗಳ ಜನರ ಜೀವನಕ್ಕೆ ನೆರವಾಗಿದ್ದು, ದೇಶದಲ್ಲಿ ಎಲ್ಲರಿಗೂ ಸರಕಾರದ ಯೋಜನೆಗಳು ಲಭಿಸುವಂತಾಗಿದೆ. ಇಂದು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರ ಹರ್ಷೋದ್ಘಾರವೂ “ಫಿರ್ ಏಕ್ ಭಾರ್ ಮೋದಿ ಸರ್ಕಾರ” ಮಾರ್ಧನಿಸಿತು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಮೋರ್ಚಾದ ಕಾರ್ಯದರ್ಶಿಗಳು, ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಶ್ರೀ ನಿಂಗಪ್ಪ ಸುತ್ತಗಟ್ಟಿ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.