Tel: +91 0836 2251055
31 March 2024
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆನು.
2014 ರ ನಂತರ ಭಾರತ ಸಶಕ್ತವಾಗಿ, ಸಮೃದ್ಧವಾಗಿ, ವಿಶ್ವಗುರುವಾಗಿ ಬೆಳೆದು ನಿಂತಿದೆ. ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ಆರ್ಥಿಕತೆಯನ್ನು ಬೇರೆ ಯಾವ ದೇಶಗಳು ಕಂಡಿಲ್ಲ. ಇದಕ್ಕೆಲ್ಲ ಕಾರಣ ಪ್ರಧಾನಿ Narendra Modi ಅವರ ಸಮರ್ಥ ನಾಯಕತ್ವ. ಭಾರತದ ಬೆಳವಣಿಗೆಯ ವೇಗ ಹೀಗೆ ನಿರಂತರವಾಗಿ ಮುಂದುವರೆದಲ್ಲಿ ಮುಂದಿನ ಅವಧಿಯಲ್ಲಿ ಭಾರತ 3 ನೇ ಅತ್ಯಂತ ಬಲಿಷ್ಠ ಆರ್ಥಿಕತೆಯಾಗಿ ಹೊರಹೊಮ್ಮುತ್ತದೆ. ಹೀಗಾಗಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಮೋದಿ ಸರ್ಕಾರಕ್ಕೆ ಬಲ ನೀಡಬೇಕು. ಇದರಿಂದಾಗಿ ಭಾರತದ ಮತ್ತೊಂದು ಇತಿಹಾಸವನ್ನು ಬರೆಯಲು ಸಾಧ್ಯ.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶ್ರೀ Amrut Desai , ಶ್ರೀಮತಿ Seema Ashok Masuti , ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ, ಪಕ್ಷದ ಪ್ರಮುಖರಾದ ಶಂಕರ ಮುಗದ ಹಾಗು ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.