29 APRIL 2024

ಇಂದು ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಮಂಗಳವಾರ ಪೇಟದಲ್ಲಿ ನಡೆದ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದನು. ಸ್ವಾತಂತ್ರ್ಯ ಬಂದು 65 ವರ್ಷಗಳಾದರೂ ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿಯೇ ಉಳಿದಿತ್ತು. ಇಂತಹ ದುಸ್ಥಿತಿಯಲ್ಲಿದ್ದ ಭಾರತವನ್ನು ಕೇವಲ 9 ವರ್ಷಗಳಲ್ಲಿ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕತೆಯಾಗಿ ಮುನ್ನಡೆಸಿದ್ದು ಪ್ರಧಾನಮಂತ್ರಿ ಶ್ರೀ Narendra Modi . ಇದರೊಂದಿಗೆ ಭಾರತಕ್ಕೆ ಡಿಜಿಟಲ್ ಪಾವತಿ ಪರಿಚಯಿಸಿ ಆರ್ಥಿಕ ಜಗತ್ತಿನಲ್ಲಿ ಕ್ರಾಂತಿಯನ್ನೇ ಮೂಡಿಸಿದ್ದು ಮೋದಿಯವರು. ಈ ಡಿಜಿಟಲ್ ಪಾವತಿಯ ಕ್ರಾಂತಿ ಇಡೀ ವಿಶ್ವವೇ ಭಾರತವನ್ನು, ಭಾರತದ ಬೆಳವಣಿಗೆಯನ್ನು ನಿಬ್ಬೆರಗಾಗಿ ನೋಡುವಂತೆ ಮಾಡಿದೆ. ಇಂತಹ ಅಭಿವೃದ್ಧಿ, ಕ್ರಾಂತಿ ಮುಂದುವರೆಯಲು ಜೊತೆಗೆ ಬಡತನ ನಿರ್ಮೂಲನೆಯ ಸಂಕಲ್ಪ ಸಾಕಾರಗೊಳ್ಳಲು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸೋಣವೆಂದು ನಾವೆಲ್ಲರೂ ಸಂಕಲ್ಪ ಮಾಡಿದೆವು.

ಇಂದಿನ ಸಭೆಯಲ್ಲಿ ಮಾಜಿ ಶಾಸಕರಾದ ಶ್ರೀ ಅಶೋಕ್ ಕಾಟವೆ, ಖ್ಯಾತ ವೈದ್ಯರಾದ ಡಾ. ಕ್ರಾಂತಿ ಕಿರಣ್, ಶ್ರೀ ಪ್ರಭು ನವಲಗುಂದಮಠ, ಶ್ರೀ ಪ್ರಕಾಶ್ ಶೃಂಗೇರಿ, ಶ್ರೀ ಶಿವು ಮೆಣಸಿನಕಾಯಿ, ಪಕ್ಷದ ಹಿರಿಯ ಕಾರ್ಯಕರ್ತರಾದ ಶ್ರೀ ಜಾಬೀನರವರು, ಪ್ರಮುಖರಾದ ಶ್ರೀ ನಾರಾಯಣ ಜರತಾರಘರ, ಶ್ರೀಮತಿ ಪೂಜಾ ಸತೀಶ ಶೀಜವಾಡಕರ, ಮಾಜಿ ಉಪ ಮಹಾಪೌರರಾದ ಶ್ರೀಮತಿ ಲಕ್ಷ್ಮಿಬಾಯಿ ಬಿಜವಾಡ, ಶ್ರೀ ಬಸವರಾಜ ಅಮ್ಮಿನಭಾವಿ, ಶ್ರೀ ಈಶ್ವರಪ್ಪ ಉಣಕಲ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: