Tel: +91 0836 2251055
17 APRIL 2024
ಇಂದು ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ 67 ಹುಗಾರ ಓಣಿ, ವಾರ್ಡ್ ನಂ 72 ಅಕ್ಕಿಪೇಟೆ ಮತ್ತು ವಾರ್ಡ್ ನಂ 80 ನೇಕಾರ ನಗರಗಳಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು.
ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರವಾಗಿರಬೇಕು. ಕಳೆದ ದಶಕದಲ್ಲಿ ಭಾರತದಲ್ಲಿ ಆಗಿರುವ ಬದಲಾವಣೆಗಳು ಇಂದಿಗೆ ವಿಶ್ವಮಟ್ಟದಲ್ಲಿ ನಮ್ಮ ದೇಶದ ಕೀರ್ತಿಯನ್ನು ಹೊಗಳುತ್ತಿದ್ದಾರೆ. ಜಗತ್ತು ಭಾರತವನ್ನು ನಾಯಕನೆಂದು ಸ್ವೀಕರಿಸಿದೆ. ಭಾರತದಲ್ಲೂ ಪ್ರತೀಯೊಬ್ಬ ದೇಶವಾಸಿಗೂ ಸರ್ಕಾರದ ಯೋಜನೆಗಳ ತಲುಪಿಸುವ ಕಾರ್ಯಕೂಡ ಶೇ 100% ರಷ್ಟು ಆಗಿದೆ. ಈಗ ನಾವೆಲ್ಲರೂ ಶ್ರಮಪಟ್ಟು ಈ ಎಲ್ಲಾ ವಿಚಾರಗಳನ್ನು ಕ್ಷೇತ್ರದ ಮನೆ ಮನೆಗೂ ತಲುಪಿಸಿ ಜನರಲ್ಲಿ ಅರಿವನ್ನು ಮೂಡಿಸಿ ಮತ್ತೊಮ್ಮೆ ಈ ದೇಶಕ್ಕೆ Narendra Modi ಅವರನ್ನು ಪ್ರಧಾನಿಯನ್ನಾಗಿ ಮಾಡುವ ಸಂಕಲ್ಪ ಮಾಡಬೇಕಿದೆ.
ಈ ಸಂದರ್ಭದಲ್ಲಿ ವಾರ್ಡ್ ನ ಬಿಜೆಪಿ ಮುಖಂಡರು, ಪಾಲಿಕೆ ಸದಸ್ಯರು, ಪಕ್ಷದ ಪ್ರಮುಖರು, ವಾರ್ಡ್ ನ ಹಿರಿಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.