1 MAY 2024

“ಹುಬ್ಬಳ್ಳಿಯಲ್ಲಿ ಚಾಣಕ್ಯನ ಧನಿಯಾದ ಕೇಸರಿ ಜನಸಾಗರ”

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಕೇಂದ್ರ ಗೃಹ ಸಚಿವ ಶ್ರೀ Amit Shah ಅವರ ನೇತೃತ್ವದಲ್ಲಿ ಇಂದು ಸಾರ್ವಜನಿಕ ಸಭೆ ನಡೆಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದೆನು.

ಕೇಂದ್ರದಲ್ಲಿ Narendra Modi ಅವರು ಮತ್ತು ಗೃಹ ಸಚಿವರಾದ ಅಮಿತ್ ಶಾ ಅವರು ನಮ್ಮ ಬಿಜೆಪಿ ಪಕ್ಷದ ಕಣ್ಣು ಮತ್ತು ಮೆದುಳಿನಂತೆ. ಈ ದೇಶದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ನರೇಂದ್ರ ಮೋದಿಯವರ ಕಣ್ಣು ನೋಡುತ್ತಿದ್ದರೆ, ಬಿಜೆಪಿ ಪಕ್ಷದ ವಿರೋಧಿಗಳ ಟೀಕೆಗಳಿಗೆ ತಕ್ಕ ಉತ್ತರ ಅಮಿತ್ ಶಾ ಅವರ ಮೆದುಳು ಮುಂಚೂಣಿಯಲ್ಲಿರುತ್ತದೆ. ಈ ದೇಶದ ಬೆಳವಣಿಗೆಗೆ ಹಾಗು ದೇಶವಾಸಿಗಳ ರಕ್ಷಣೆಗೆ ಈ ಇಬ್ಬರು ನಾಯಕರು ತಮ್ಮ ಸರ್ವಸ್ವವನ್ನೂ ತ್ಯಜಿಸಿದ್ದಾರೆ. ಇಂದು ರಾಜಕೀಯ ಚಾಣಾಕ್ಷ ಶ್ರೀ ಅಮಿತ್ ಶಾ ಅವರು ನಮ್ಮ ಕ್ಷೇತ್ರಕ್ಕೆ ಬಂದು ನನ್ನ ಪರವಾಗಿ ಪ್ರಚಾರ ಕೈಗೊಂಡಿದ್ದು ಕ್ಷೇತ್ರದ ನಮ್ಮ ಕಾರ್ಯಕರ್ತರಿಗೆ ಸಹಸ್ರ ಗಜಗಳ ಬಲ ಬಂದಂತಾಗಿದೆ.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ Basanagouda Patil Yatnal , ಶ್ರೀ Arvind Bellad , ಶ್ರೀ Mahesh Tenginkai , ಶ್ರೀ M R Patil , ವಿಧಾನ ಪರಿಷತ್ ಸದಸ್ಯರಾದ ಶ್ರೀ Pradeep Shettar , ಶ್ರೀ S V Sankanur , ಮಾಜಿ ಶಾಸಕರಾದ ಶ್ರೀ Shankar Patil Munenakoppa , ಶ್ರೀ Amrut Desai , ಶ್ರೀಮತಿ Seema Ashok Masuti , ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ಶ್ರೀ ನಿಂಗಪ್ಪ ಸುತಗಟ್ಟಿ, ಧಾರವಾಡ ಜಿಲ್ಲಾ ಬಿಜೆಪಿ ಸಂಚಾಲಕರಾದ ಮಾ ನಾಗರಾಜ್, ಹು – ಧಾ ಪಾಲಿಕೆಯ ಮಹಾ ಪೌರರಾದ ಶ್ರೀ ವೀಣಾ ಭರದ್ವಾಡ, ಪ್ರಮುಖರಾದ ಶ್ರೀ ಲಿಂಗರಾಜ ಪಾಟೀಲ್, ಶ್ರೀ ಶಿವು ಮೆಣಸಿನಕಾಯಿ, ಶ್ರೀ ಪ್ರಭು ನವಲಗುಂದಮಠ, ಶ್ರೀ ದತ್ತಮೂರ್ತಿ ಕುಲಕರ್ಣಿ ಹಾಗೂ ಪಕ್ಷದ ಪ್ರಮುಖರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: