4 MAY 2024

ಇಂದು ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನಡೆದ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ಸಭಿಕರನ್ನುದ್ದೇಶಿಸಿ ಮಾತನಾಡಿದೆನು. ದೀನದಯಾಳ ಅಂತ್ಯೋದಯ ಯೋಜನೆಯ ಮೂಲಕ ಸ್ವ-ಉದ್ಯೋಗಕ್ಕಾಗಿ ಕೌಶಲ್ಯ ತರಬೇತಿ ಮತ್ತು ಕೌಶಲ್ಯ ಉನ್ನತೀಕರಣದ ಮಾಡಿ, ಜೀವನೋಪಾಯದ ಅವಕಾಶಗಳನ್ನು ಸುಧಾರಿಸಿ ಬಡತನವನ್ನು ಕಡಿಮೆ ಮಾಡುವಲ್ಲಿ ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರವು ಶ್ರಮಿಸಿದೆ. ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದ ಸರಿಸುಮಾರು 1,30,000 ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿವೆ. ದೇಶವನ್ನು ಮುನ್ನಡೆಸುವ ಜೊತೆಗೆ ದೇಶವಾಸಿಗಳ ಜೀವನವೂ ಉತ್ತಮವಾಗಿಸಬೇಕೆಂದು ಸೂಕ್ತ ಯೋಜನೆಗಳನ್ನು ಕಾಲ ಕಾಲಕ್ಕೆ ಜಾರಿಗೊಳಿಸಿ ಅಭಿವೃದ್ಧಿಯ ಕಾರಣಕರ್ತೃವಾದ ಶ್ರೀ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿಸೋಣವೆಂದು ಮತ ಯಾಚಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ Mahesh Tenginkai , ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ರಾಜ್ಯ ಎಸ್‌ಟಿ ಮೋರ್ಚಾ ಖಜಾಂಚಿಗಳಾದ ಶ್ರೀ ಮಣಿಕಂಠ ಶ್ಯಾಗೋಟಿ, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿಗಳಾದ ಶ್ರೀಮತಿ ಮೇನಕಾ ಹುರುಳಿ, ಪ್ರಮುಖರಾದ ಶ್ರೀ ಶೇಖರಪ್ಪ ಗುಳಗಣ್ಣವರ, ಶ್ರೀ ರಾಜು ಗೌಡರ, ಶ್ರೀ ವಿವೇಕ್ ಹಿರೇಮಠ್, ಶ್ರೀ ಬಸವರಾಜ್ ಬನ್ನಿಕಟ್ಟಿ, ಶ್ರೀ ಬಸಯ್ಯ ಹಿರೇಮಠ, ಶ್ರೀ ಹನುಮಾನ್ ಕರಲಿಂಗಣ್ಣವರ ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: