Tel: +91 0836 2251055
17 APRIL 2024
ಇಂದು ಹುಬ್ಬಳ್ಳಿಯ ಅಯೋಧ್ಯಾನಗರ ಮತ್ತು ವಿಠ್ಠಲಪೇಟೆ ಚನ್ನಪೇಟೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾಡಿದೆನು.
ಈ ಬಾರಿ ಬಿಜೆಪಿ ಪಕ್ಷವನ್ನು ಹಾಗು Narendra Modi ಅವರ ನಾಯಕತ್ವವನ್ನು ಭಾರತದಲ್ಲಿ ಪುನರ್ ಸ್ಥಾಪಿಸಿ ದೇಶದ ಆರ್ಥಿಕತೆ ಅಭಿವೃದ್ಧಿ ಮತ್ತು ಸರ್ವತೋಮುಖ ಅಭಿಯಾನಕ್ಕೆ ನಾಂದಿ ಹಾಡಬೇಕಿದೆ. ಹಾಗಾಗಿ ಈ ಬಾರಿ ನಮ್ಮ ಆಯ್ಕೆ ಬಿಜೆಪಿಯೇ ಆಗಿರಲಿ ಎಂದು ಸಭೆಯಲ್ಲಿದ್ದ ಎಲ್ಲರ ಬೆಂಬಲ ಕೋರಿದೆನು.
ಈ ಸಂದರ್ಭದಲ್ಲಿ ಚಿತ್ರನಟಿ ಹಾಗು ಬಿಜೆಪಿ ವಕ್ತಾರರಾದ ಶ್ರೀಮತಿ ತಾರಾ, ಪಕ್ಷದ ಪ್ರಮುಖರಾದ ಶ್ರೀ ಪ್ರಭು ನವಲಗುಂದಮಠ, ಶ್ರೀ ಅಶೋಕ್ ಕಾಟವೆ, ಶ್ರೀ ಶಿವು ಮೆಣಸಿನಕಾಯಿ, ಶ್ರೀಮತಿ ರಾಧಾಬಾಯಿ ಸಫಾರಿ, ಶ್ರೀ ಸಂತೋಷ್ ಅರಕೇರಿ ಹಾಗೂ ಪಕ್ಷದ ಮುಖಂಡರು ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.