2 MAY 2024

ಇಂದು ಹುಬ್ಬಳ್ಳಿಯಲ್ಲಿ ನಡೆದ ಎಸ್ ಸಿ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮ ದೇಶದ ಗಣತಂತ್ರದ ಹೆಗ್ಗುರುತು. ಈ ದೇಶಕ್ಕೆ ಬಾಬಾಸಾಹೇಬರು ನೀಡಿರುವ ಕೊಡುಗೆ ಅಪಾರವಾಗಿದೆ. ಸಂವಿಧಾನವನ್ನು ರಚಿಸುವ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಈ ದೇಶದ ಪ್ರಜಾಪ್ರಭುತ್ವಕ್ಕೆ ವಿಶಿಷ್ಟವಾದ ಶಕ್ತಿಯನ್ನು ತುಂಬಿದರು. ಇಂತಹ ಮಹಾಪುರುಷನನ್ನ ಕಾಂಗ್ರೆಸ್ ಅವಮಾನ ಮಾಡುತ್ತಲೇ ಬಂದಿದೆ. ಆದರೆ Narendra Modi ಸರ್ಕಾರ ಅಂಬೇಡ್ಕರ್ ಅವರ ಐದು ಪುಣ್ಯ ಸ್ಥಳಗಳನ್ನು 5 ತೀರ್ಥಕ್ಷೇತ್ರಗಳನ್ನಾಗಿ ಪರಿವರ್ತನೆ ಮಾಡುವುದರ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಬಹುದೊಡ್ಡ ಗೌರವವನ್ನು ನೀಡಿದೆ. ಬಿಜೆಪಿ ಪಕ್ಷ ಎಂದಿಗೂ ಸಂವಿಧಾನವನ್ನ ಬದಲಿಸುವ ಆಲೋಚನೆ ಮಾಡಿಯೇ ಇಲ್ಲ. ಸಂವಿಧಾನದ ಸಂರಕ್ಷಣೆಯನ್ನು ಮಾಡುವಲ್ಲಿ ಮೋದಿ ಸರ್ಕಾರ ಸಮರ್ಥವಾಗಿ ಕಾರ್ಯನಿರ್ವಹಿಸಿದೆ. ಈ ದೇಶದ ಸಂವಿಧಾನದ ಪ್ರತಿಯೊಂದು ಆಶಯಗಳು ಈಡೇರಬೇಕಾದಲ್ಲಿ ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಆಡಳಿತಕ್ಕೆ ಬರಬೇಕು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ Govind M Karjol , ಮಾಜಿ ಶಾಸಕರಾದ ಶ್ರೀ ಎನ್ ಮಹೇಶ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ ಎಸ್ ವೀರಯ್ಯ, ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಪ್ರಮುಖರಾದ ಡಾ. ಕ್ರಾಂತಿ ಕಿರಣ್, ಶ್ರೀ ಚಂದ್ರಶೇಖರ ಗೋಕಾಕ, ಶ್ರೀ ಮಹೇಂದ್ರ ಕೌತಾಳ, ಶ್ರೀ ಬಸವರಾಜ್ ಅಮ್ಮಿನಭಾವಿ, ಶ್ರೀ ವೀರಭದ್ರಪ್ಪ ಹಾಲಹರವಿ ಹಾಗೂ ಪಕ್ಷದ ಪ್ರಮುಖರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: