Tel: +91 0836 2251055
1 MAY 2024
ಇಂದು ಹುಬ್ಬಳ್ಳಿಯ ಅರವಿಂದನಗರದಲ್ಲಿನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ “ಅಲೆಮಾರಿಗಳ ಹೆಮ್ಮೆ, ಮೋದಿ ಮತ್ತೊಮ್ಮೆ”, ಸೂಕ್ಷ್ಮ, ಅತಿಸೂಕ್ಷ್ಮ ಸಮುದಾಯಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದೆನು. ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅವರ ಸರ್ವತೋಮುಖ ಏಳಿಗೆಗಾಗಿ ಬಿಜೆಪಿಯನ್ನು ಮತ್ತೆ ಗೆಲ್ಲಿಸಬೇಕೆಂದು ನೆರೆದಿದ್ದ ಅಲೆಮಾರಿ ಸಮುದಾಯದ ಜನರು ಸಂಕಲ್ಪ ಮಾಡಿ ಒಮ್ಮತ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಡಿ.ಎಸ್.ವೀರಯ್ಯ
ಶ್ರೀನಿವಾಸ್ ಶಾಸ್ತ್ರೀ, ಪ್ರಮುಖರಾದ ಶ್ರೀ ಲೋಹಿತ್, ಶ್ರೀ ಶ್ರೀನಿವಾಸ್ ಶಾಸ್ತ್ರೀ, ಶ್ರೀ ಲಕ್ಷ್ಮಣ್ ಕರಿಯವರ್, ಶ್ರೀ ಸುನೀಲ್ ಹೇಳವರ್, ಶ್ರೀ ಮುನಿಯಪ್ಪ, ಶ್ರೀ ದುರ್ಗಪ್ಪ, ಶ್ರೀ ಮಲ್ಲೇಶ್ ಚೆನ್ನಬಾಟ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.