22 APRIL 2024

ಸವಣೂರಿನ‌ ಸಿಂಪಿಗಲ್ಲಿಯಲ್ಲಿ ಕಾರಡಗಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಹಾಗು ಸವಣೂರು ನಗರದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು.

2014 ರಿಂದ 10 ವರ್ಷಗಳ ಕಾಲ ಪ್ರಧಾನಮಂತ್ರಿ ಶ್ರೀ Narendra Modi ಅವರ ಆಡಳಿತದಲ್ಲಿ ಭಾರತ ಮಹೋನ್ನತ ಅಭಿವೃದ್ಧಿ ಸಾಧಿಸುವುದರ ಜೊತೆಗೆ ಸರ್ವ ವರ್ಗಗಳ ಏಳಿಗೆಗಾಗಿ ಶ್ರಮಿಸಿದೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ಮಹಿಳೆಯರಿಗೆ ಉಜ್ವಲಾ ಯೋಜನೆ ಮೂಲಕ ಉಚಿತ LPG ಸಂಪರ್ಕ, ಸ್ವಂತ ವ್ಯಾಪಾರ ಮಾಡುವವರಿಗೆ ಮುದ್ರಾ ಲೋನ್ ಮತ್ತು ಸ್ವನಿಧಿ ಯೋಜನೆ, ಮನೆ ಮನೆಗೂ ನಳದಲ್ಲಿ ನೀರು ಸರಬರಾಜು, ಕಡು ಬಡವರಿಗೂ ತಲೆಯ ಮೇಲೊಂದು ಸೂರು, ಸೂರ್ಯ ಘರ್ ಯೋಜನೆ ಮೂಲಕ ಉಚಿತ ವಿದ್ಯುತ್, ಹೆಚ್ಚಿದ ಹೆದ್ದಾರಿಗಳು, ಹೆಚ್ಚಿದ ವಿಮಾನ ನಿಲ್ದಾಣಗಳು, ಹೆಚ್ಚಿದ ರೈಲು ಸಂಪರ್ಕ, ಶಿಕ್ಷಣದ ಉನ್ನತೀಕರಣಕ್ಕೆ ವಿಶ್ವವಿದ್ಯಾಲಯಗಳ ಅಭಿವೃದ್ಧಿ, ಮೋದಿಯವರ ನೇತೃತ್ವದಲ್ಲಿ ಜಾರಿಗೊಳಿಸಿ ಯಶಸ್ವಿಯಾದ ಯೋಜನೆಗಳು ಒಂದೆರಡಲ್ಲ. ಭಾರತದ ಸುವರ್ಣ ಯುಗದ ಕನಸನ್ನು ನನಸಾಗಿಸುವುದಕ್ಕೆ ಮತ್ತೆ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಮೋದಿಯವರನ್ನು ಪ್ರಧಾನಿಯನ್ನಾಗಿಸಬೇಕಿದೆ.

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ಶ್ರೀ ಹನುಮಂತ ಗೌಡ ಮುನಿಗೌಡ, ಶಿಗ್ಗಾಂವ ತಾಲೂಕು ಬಿಜೆಪಿ ಅಧ್ಯಕ್ಷರಾದ ಶ್ರೀ ಶಿವಾನಂದ ಮ್ಯಾಗೇರಿ, ಕೆ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಸುಭಾಷ್ ಗಡಪ್ಪನವರ್, ನಿಕಟಪೂರ್ವ ಮಂಡಲಾಧ್ಯಕ್ಷರಾದ ಶ್ರೀ ಗಂಗಾಧರ ಬಾಣದ್, ಪ್ರಮುಖರಾದ ಶ್ರೀ ಮನಾರಪ್ಪ ತಳಲ್ಲಿ,ಹಾವೇರಿ ಜಿಲ್ಲಾ ಪ್ರಯೋಗ ಕಾರ್ಯದರ್ಶಿ ಶ್ರೀ ಮಂಜುನಾಥ್ ಗಾಣಿಗೇರಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶೋಭಾ ನಿಸ್ಸಿಮಗೌಡರ್, ಶ್ರೀ ಶ್ರೀಕಾಂತ್ ದುಂಡಿಗೌಡರ್, ಶ್ರೀ ಶಂಕರ್ ಗೌಡ ಪಾಟೀಲ್, ಶ್ರೀಮತಿ ಶೈಲಾ ಮುನಿಗೌಡರ್, ಶ್ರೀ ಶಶಿಧರ್ ಎಳಿಗಾರ್, ಶ್ರೀ ನಿಂಗಪ್ಪ ಮರಿಗಪ್ಪ ಹಾಗೂ ಸಮಾಜದ ಪ್ರಮುಖರು ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: