21 APRIL 2024

ಹುಬ್ಬಳ್ಳಿಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ಅವರೊಂದಿಗೆ ವಿವಿಧ ಸಮುದಾಯಗಳ ಜೊತೆ ನಡೆದ ಸಭೆಯಲ್ಲಿ ಭಾಗವಹಿಸಿದೆನು.

ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದಲ್ಲಿ ಭಾರತವು ಸುಭಿಕ್ಷ ಹಾಗೂ ಸದೃಢವಾಗಬೇಕೆಂದು ಕಳೆದ 10 ವರ್ಷಗಳ ಕಾಲ ನಿರಂತರ ಶ್ರಮಿಸಿದೆ. ಭ್ರಷ್ಟಾಚಾರ ಎಂದರೆ ಬಡವರ ಜೇಬಿಗೆ ಕತ್ತರಿ ಹಾಕುವ ಕೆಲಸ. ಅದನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದು ಭ್ರಷ್ಟಾಚಾರ ನಿರ್ಮೂಲನೆಗೆ ಟೊಂಕ ಕಟ್ಟಿ ನಿಂತಿದೆ. ಅದರ ಜೊತೆಗೆ ಗಡಿಯನ್ನು ಕಾಯುವ ನಮ್ಮ ಯೋಧರ ಕೈಗಳನ್ನು ಕಾಂಗ್ರೆಸ್ ಆಡಳಿತದಲ್ಲಿ ಕಟ್ಟಿಹಾಕಲಾಗಿತ್ತು. ಭಾರತದ ಮೇಲೆ ದಾಳಿಯಾದರೆ ಉತ್ತರ ಕೊಡುವುದಕ್ಕೂ ಅವರಿಗೆ ಅಧಿಕಾರವಿರಲಿಲ್ಲ. ಆದರೀಗ ಪುಲ್ವಾಮಾದಂಥ ದಾಳಿಗೆ ತಕ್ಕ ಉತ್ತರ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಡುವಂಥ ಬಲಾಢ್ಯ ದೇಶವಾಗಿದೆ ಭಾರತ. ಭಾರತದ ಮುನ್ನಡೆಗಾಗಿ ಮತ್ತೆ ಮೋದಿಯವರನ್ನು ಪ್ರಧಾನಿಯಾಗಿಸಲು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಬೇಕು.

ಈ ಸಭೆಯಲ್ಲಿ ಶಾಸಕರಾದ ಶ್ರೀ Arvind Bellad , ಶ್ರೀ Mahesh Tenginkai , ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಶ್ರೀ ನಿಂಗಪ್ಪ ಸುತಗಟ್ಟಿ, ಧಾರವಾಡ ಜಿಲ್ಲಾ ಚುನಾವಣಾ ಸಂಚಾಲಕರಾದ ಶ್ರೀ ಮ ನಾಗರಾಜ್, ಮಾಜಿ ಶಾಸಕರಾದ ಶ್ರೀ ಅಶೋಕ್ ಕಾಟವೆ, ಶ್ರೀಮತಿ Seema Ashok Masuti , ಪಕ್ಷದ ಪ್ರಮುಖರಾದ ಶ್ರೀ ಲಿಂಗರಾಜ ಪಾಟೀಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: