27 APRIL 2024

ಇಂದು ಶಿಗ್ಗಾಂವ-ಸವಣೂರ ವಿಧಾನಸಭಾ ಕ್ಷೇತ್ರದ ಎನ್. ಎಂ. ತಡಸ, ಬೆಂಡಿಗೇರಿ, ಮಣಕಟ್ಟಿ ಹಾಗೂ ಕಬನೂರ ಗ್ರಾಮಗಳಲ್ಲಿ ನಡೆದ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು. ಡಿಜಿಟಲ್ ಪಾವತಿಯನ್ನು ಪರಿಚಯಿಸಿ ಜಗತ್ತೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದು ಭಾರತ ಭೇಷ್ ಅನ್ನಿಸಿಕೊಳ್ಳುವಂತೆ ಮಾಡಿದ್ದು ಪ್ರಧಾನಮಂತ್ರಿ Narendra Modi ಅವರು. ಅವರ ಮುಂದಿನ ಸಂಕಲ್ಪ ಬಡತನವನ್ನು ಭಾರತದಿಂದ ತೊಲಗಿಸುವುದು. ಅದನ್ನು ಸಾಕಾರಗೊಳಿಸಲು ನಾವು ಅವರ ಬಲವಾಗೋಣ. ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸೋಣವೆಂದು ಹುರಿದುಂಬಿಸಿ, ಮತಯಾಚಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ಶಿವಾನಂದ ಮ್ಯಾಗೇರಿ, ಶ್ರೀ ಶ್ರೀಕಾಂತ್ ದುಂಡೀಗೌಡರ್, ಶ್ರೀ ಶಶಿಧರ್ ಯಲಿಗಾರ, ಶ್ರೀ ತಿಪ್ಪಣ್ಣ ಸಾತಣ್ಣವರ, ಶ್ರೀ ಪ್ರಸಾದ್ ಸುರಗಿಮಠ, ಶ್ರೀ ರವಿ ಕುಡೊಕ್ಕಲಿಗಾರ್ , ಶ್ರೀ ಬಸವರಾಜ್ ನಾರಾಯಣಪುರ , ಶ್ರೀಕಾಂತ್ ಬುಳ್ಳಕ್ಕನವರ, ಶ್ರೀ ದೇವಣ್ಣ ಚಾಕಲಬ್ಬಿ, ಶ್ರೀ ಶಂಕರ್ ಪೊಲೀಸ್ ಗೌಡ್ರು, ಶ್ರೀ ಹೊನ್ನಪ್ಪ ಹೂಗಾರ್, ಶ್ರೀ ಸೋಮಯ್ಯ ಗೌರಿಮಠ ಹಾಗು ಪಕ್ಷದ ಪ್ರಮುಖರು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: