Tel: +91 0836 2251055
3 MAY 2024
ಇಂದು ಶಿಗ್ಗಾಂವ-ಸವಣೂರ ವಿಧಾನಸಭಾ ಕ್ಷೇತ್ರದ ಅಂದಲಗಿ, ಹುನಗುಂದ, ಮತ್ತು ಗುಡ್ಡದ ಚಂದಾಪುರ ಗ್ರಾಮಗಳಲ್ಲಿ ನಡೆದ ಪ್ರಚಾರಾರ್ಥ ಸಭೆಗಳಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು. 2014ಕ್ಕೂ ಮುನ್ನ ದೇಶದಲ್ಲಿದ್ದ ಒಟ್ಟು ಗ್ಯಾಸ್ ಸಂಪರ್ಕ 13 ಕೋಟಿ. 2014ರ ನಂತರ ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ 18 ಕೋಟಿಗೂ ಹೆಚ್ಚು ಗ್ಯಾಸ್ ಸಂಪರ್ಕ ಒದಗಿಸಿ ಈಗ 31 ಕೋಟಿಗೂ ಹೆಚ್ಚು ಒಟ್ಟು ಗ್ಯಾಸ್ ಸಂಪರ್ಕಗಳಿವೆ. ಕಳೆದ 7 ವರ್ಷಗಳಲ್ಲಿ ನಮ್ಮ ಧಾರವಾಡ ಕ್ಷೇತ್ರದಲ್ಲಿ ಒಟ್ಟು 40,699 ಗ್ಯಾಸ್ ಸಂಪರ್ಕ ಒದಗಿಸಲಾಗಿದೆ. ಇದರಿಂದಾಗಿ ಕ್ಷೇತ್ರದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಜನರಿಗಾಗಿ ಶ್ರಮಿಸುವ ಇಂತಹ ನಾಯಕನನ್ನು ಮತ್ತೆ ಪ್ರಧಾನಿ ಮಾಡಲು ನಾವೆಲ್ಲರೂ ಬದ್ಧರಾಗೋಣವೆಂದು ಮತ ಯಾಚಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ Dr. Murugesh R Nirani , ಪ್ರಮುಖರಾದ ಶ್ರೀ ಶ್ರೀಕಾಂತ್ ದುಂಡಿಗೌಡ್ರ, ಶ್ರೀ ಶಿವಾನಂದ ಮ್ಯಾಗೇರಿ, ಹಾಗೂ ಪಕ್ಷದ ಪ್ರಮುಖರು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.