Tel: +91 0836 2251055
6 APRIL 2024
ಶಿಗ್ಗಾಂವ – ಸವಣೂರು ವಿಧಾನಸಭಾ ಕ್ಷೇತ್ರದ ಹುಲಗೂರ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಪ್ರಮುಖರು ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆನು.
ಈ ದೇಶದಲ್ಲಿ ಪ್ರಧಾನಿ ಶ್ರೀ Narendra Modi ಅವರ ಆಡಳಿತದಲ್ಲಿ ಅಭೂತಪೂರ್ವ ಅಭಿವೃದ್ಧಿಗಳು ನಡೆದಿವೆ. ದೇಶದ ಮೂಲೆ ಮೂಲೆಗೂ ಇಂದು ವಿದ್ಯುತ್ ತಲುಪಿಸಲು ಮಹತ್ತರ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಗೆ ಪುಷ್ಠಿ ನೀಡುವಂತೆ ಕಲ್ಲಿದ್ದಲು ಸಚಿವಾಲಯ ಕೂಡ ಹಗಲು ರಾತ್ರಿ ಶ್ರಮಿಸಿ ದೇಶವಾಸಿಗಳ ಒಳಿತಿಗೆ ಕಾರಣವಾಗಿದೆ. ದೇಶವಾಸಿಗಳ ಮನೆಗೆ ಜ್ಯೋತಿಯಾಗಿರುವ ನರೇಂದ್ರ ಮೋದಿಯವರ ನಾಯಕತ್ವವನ್ನು ಮತ್ತೊಮ್ಮೆ ಆರಿಸಿ ದೇಶದ ಉನ್ನತಿಗೆ ಕೊಡುಗೆ ನೀಡಲು ನೆರೆದಿದ್ದ ಜನರ ಬಳಿ ಮತಯಾಚನೆ ಮಾಡಿದೆನು. ನೆರೆದಿದ್ದ ಎಲ್ಲ ಜನರು ಕೂಡ ಮೋದಿಯವರ ಕಾರ್ಯಗಳನ್ನು ಪ್ರಶಂಸಿಸಿ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ತಮ್ಮ ಘೋಷಣೆಗಳ ಮೂಲಕ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲಾಧ್ಯಕ್ಷರಾದ ಶ್ರೀ ಶಿವಾನಂದ ಮ್ಯಾಗೇರಿ, ಶ್ರೀ ಶಶಿಧರ ಯಲಿಗಾರ, ಶ್ರೀ ಶ್ರೀಕಾಂತ್ ದುಂಡಿಗೌಡ್ರ, ಶ್ರೀಮತಿ ಶೋಭಾ ನಿಸ್ಸೀಮಗೌಡ್ರ, ಶ್ರೀ ಬಿ ಎಸ್ ಮಾಳಗಿ ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.