Tel: +91 0836 2251055
1 APRIL 2024
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಶಿಗ್ಗಾಂವ ಮಂಡಲ ಕೋಣನಕೇರಿ ಗ್ರಾಮದ ಧುಂಡಶಿ ಮಹಾಶಕ್ತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆನು.
2014ರವರೆಗೆ ಜಗತ್ತಿನ ಐದು ದುರ್ಬಲ ರಾಷ್ಟ್ರಗಳಲ್ಲಿ ಒಂದಾಗಿದ್ದ ಭಾರತವನ್ನು ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಮುನ್ನಡೆಸಿದ ಶ್ರೇಯಸ್ಸು ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ್ದು. ಈ ಏಳಿಗೆಯು ಹೀಗೆಯೇ ಮುಂದುವರೆಯಬೇಕಾದರೆ ಮೂರನೇ ಬಾರಿಗೆ ಬಿಜೆಪಿಯು ಬಹುಮತದಿಂದ ಈ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ನಂಬಿರುವ ಕಾರ್ಯಕರ್ತರು ಒಮ್ಮತದಿಂದ ಬಿಜೆಪಿಯನ್ನು ಈ ಬಾರಿಯೂ ಗೆಲ್ಲಿಸುವುದಕ್ಕೆ ಶ್ರಮಿಸುವುದಾಗಿ ಬೆಂಬಲ ಸೂಚಿಸಿದರು.
ಇಂದಿನ ಸಮಾವೇಶದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ಶಿವಾನಂದ ಮ್ಯಾಗೇರಿ, ಪಕ್ಷದ ಪ್ರಮುಖರಾದ ಶ್ರೀ ಶ್ರೀಕಾಂತ ದುಂಡಿಗೌಡ್ರ, ಶ್ರೀ ತಿಪ್ಪಣ್ಣ ಸಾತಣ್ಣನವರ, ಶ್ರೀಮತಿ ಶೋಭಾ ನಿಸ್ಸೀಮಗೌಡ್ರ, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.