Tel: +91 0836 2251055
30 APRIL 2024
“ಶಿಗ್ಗಾಂವಿಯಲ್ಲಿ ಮೊಳಗಿದ ಕೇಸರಿ ಪಡೆಯ ವಿಜಯದ ಪಾಂಚಜನ್ಯ”
ಇಂದು ಚುನಾವಣಾ ಪ್ರಚಾರಾರ್ಥವಾಗಿ ಶಿಗ್ಗಾಂವಿ ನಗರದ ಸಂತೆ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು.
Narendra Modi ಅವರ ನೇತೃತ್ವದ ಸರ್ಕಾರ ಜನರಿಂದ ಜನರಿಗಾಗಿ ಜನರಿಗೋಸ್ಕರ ಸದಾ ದುಡಿಯುವ ಸರ್ಕಾರ. ದೇಶದ ಎಲ್ಲ ಜನರ ಕ್ಷೇಮಕ್ಕಾಗಿ, ಅಭಿವೃದ್ದಿಗಾಗಿ ಮತ್ತು ಸರ್ವತೋಮುಖ ಬೆಳವಣಿಗಾಗಿ ಸದಾ ಕೆಲಸ ಮಾಡುತ್ತಿದೆ. ಜಗತ್ತಿಗೆ ಭಾರತ ಕೇವಲ ಒಂದು ದೇಶವಾಗಿ ಉಳಿದಿಲ್ಲ. ಭಾರತವನ್ನು ಪ್ರಪಂಚ ತನ್ನ ಹಿರಿಯಣ್ಣನಾಗಿ ಸ್ವೀಕರಿಸಿದೆ. ಹೀಗಿರುವಾಗ ದೇಶದ ಪ್ರತೀ ನಾಗರಿಕನೂ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಮತ್ತೊಮ್ಮೆ ಈ ದೇಶದ ಪ್ರಧಾನಿಯನ್ನಾಗಿ ಆರಿಸಬೇಕು. ಮುಂಬರುವ ಲೋಕಸಭಾ ಚುನಾವಣೆ ಕೇವಲ ಒಂದು ಚುನಾವಣೆಯಲ್ಲ ದೇಶದ ಸುವರ್ಣ ಯುಗಕ್ಕೆ ನಾಂದಿಯಾಗಲಿದೆ. ಹೀಗಾಗಿ ನಾವೆಲ್ಲರೂ ಎಚ್ಚೆತ್ತು ನರೇಂದ್ರ ಮೋದಿಯವರ ಸಮರ್ಥ ನಾಯಕತ್ವಕ್ಕೆ ನಮ್ಮ ಅಮೂಲ್ಯವಾದ ಮತ ನೀಡಿ ದೇಶದ ಐತಿಹಾಸಿಕ ಕ್ಷಣಗಳಿಗೆ ಮುನ್ನುಡಿ ಬರೆಯೋಣ ಎಂದು ನೆರೆದಿದ್ದ ಜನಸಾಗರದ ಬಳಿ ಬೆಂಬಲ ಕೋರಿದೆನು.
ಈ ಸಂದರ್ಭದಲ್ಲಿ ವಿಧಾನಸಭಾ ವಿಪಕ್ಷ ನಾಯಕರಾದ ಶ್ರೀ R Ashoka , ಶಾಸಕರಾದ ಶ್ರೀ Basanagouda Patil Yatnal , ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕಾ ಅವಿನಾಶ್, ಪ್ರಮುಖರಾದ ಶ್ರೀ ಶಿವಾನಂದ ಮ್ಯಾಗೇರಿ, ಶ್ರೀ ಶ್ರೀಕಾಂತ್ ದುಂಡಿಗೌಡರ್, ಶ್ರೀ ಶಶಿಧರ್ ಯಲಿಗಾರ, ಶ್ರೀ ತಿಪ್ಪಣ್ಣ ಸಾತಣ್ಣವರ, ಶ್ರೀ ಪ್ರಸಾದ್ ಸುರಗಿಮಠ, ಶ್ರೀ ರವಿ ಕುಡೊಕ್ಕಲಿಗಾರ್ , ಶ್ರೀ ಬಸವರಾಜ್ ನಾರಾಯಣಪುರ , ಶ್ರೀ ಗಂಗಾಧರ್ ಬಾಣದ ಹಾಗೂ ಪಕ್ಷದ ಪ್ರಮುಖರು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.