Tel: +91 0836 2251055
4 APRIL 2024
ದೇಶದ ಸರ್ವತೋಮುಖ ಅಭಿವೃದ್ಧಿಯ ಹಿತದೃಷ್ಟಿಯಿಂದ ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಇಂದು ಶಿಕ್ಕಲಗಾರ ಸಮಾಜದ ಪ್ರಮುಖರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿದೆನು.
ಈ ಚುನಾವಣೆಯ ಗೆಲುವಿನ ನಂತರ ನರೇಂದ್ರ ಮೋದಿಯವರ ಮೂರನೇ ಕಾರ್ಯಾವಧಿಯಲ್ಲಿ ಭಾರತ ವಿಶ್ವದ ಎದುರು ತನ್ನ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆಯಲಿದೆ. ಜಗತ್ತಿಗೆ ವಿಶ್ವಗುರು, ಹಿರಿಯಣ್ಣನಾಗಲು ಹೊರಟಿರುವ ಭಾರತದ ವೇಗಕ್ಕೆ ನರೇಂದ್ರ ಮೋದಿಯವರ ನಾಯಕತ್ವ ಮತ್ತಷ್ಟು ಪುಷ್ಟಿ ನೀಡಲಿದೆ. ಮುಂದಿನ ಅವಧಿಯಲ್ಲಿ ಭಾರತ ಅತ್ಯಂತ ಬಲಿಷ್ಠ, ಸಮರ್ಥ ಮತ್ತು ಶ್ರೇಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಶಿಕ್ಕಲಗಾರ ಸಮಾಜದ ರಾಜ್ಯಾಧ್ಯಕ್ಷರಾದ ಶ್ರೀ ದಶರಥವಾಲಿ, ಶಿಕ್ಕಲಗಾರ ಸಮಾಜದ ಪ್ರಮುಖರಾದ ಶ್ರೀ ಫಕೀರಪ್ಪ ಶ್ರಾವಣ, ಶ್ರೀ ಪ್ರಕಾಶ್ ಕಟ್ಟಿಮನಿ, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.