Tel: +91 0836 2251055
• ಹುಬ್ಬಳ್ಳಿಯಲ್ಲಿ ರೂ 160 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ದರ್ಜೇಯ ಸುಸಜ್ಜಿತ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದ್ದು ಈಗ ಹುಬ್ಬಳ್ಳಿಯ ವಿಮಾನ ನಿಲ್ದಾಣವು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿಯೋಜನೆಯಾದ ‘ಉಡಾನ್’ ಅಡಿ ದೇಶದ ಹಾಗೂ ರಾಜ್ಯದ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕಕಲ್ಪಿಸಲಾಗಿದೆ.
• ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿದ್ದ ಹಳೆಯ ಕಟ್ಟಡವನ್ನು 60.6 ಲಕ್ಷರೂ. ಗಳ ವೆಚ್ಚದಲ್ಲಿ ಸರಕು ಟರ್ಮಿನಲ್ ಆಗಿ ಪರಿವರ್ತಿಸಲಾಗಿದೆ.
• ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿಕೇಂದ್ರವನ್ನುಆರಂಭಿಸಲು ಕೇಂದ್ರ ವಿಮಾನಯಾನ ಸಚಿವಾಲಯವು ತೀರ್ಮಾನಿಸಿದೆ.
• ಹುಬ್ಬಳ್ಳಿಯಿಂದ ನವದೆಹಲಿಗೆ ಪ್ರತಿನಿತ್ಯ ನೇರ ವಿಮಾನ ಸೇವೆಯನ್ನುಇಂಡಿಗೋ ಏರ್‍ಲೈನ್ಸ್ ಒದಗಿಸಿದೆ.
• ಹುಬ್ಬಳ್ಳಿಯ ವಿಮಾನ ನಿಲ್ದಾಣ 8 ಮೆಗಾ ವ್ಯಾಟ್ ಸೌರಶಕ್ತಿಆಧಾರಿತ ವಿದ್ಯುತ್‍ಉತ್ಪಾದನಾಘಟಕ ಆರಂಭಿಸಿರುವುದರೊಂದಿಗೆ ಈಗ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿದೆ.