Tel: +91 0836 2251055
10 March 2024
ವಿಕಸಿತ ಭಾರತದ ಕನಸನ್ನು ಹೊತ್ತು ದೇಶಾದಾದ್ಯಂತ ಅಭಿವೃದ್ಧಿ ಮಾಡಿ ಜನರ ಏಳ್ಗೆಗಾಗಿ ಪ್ರಧಾನಿ Narendra Modi ಅವರು ಶ್ರಮಿಸುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಯಾವ ಅಂಶಗಳು ಇರಬೇಕು ಎಂದು ತಿಳಿದುಕೊಳ್ಳಲು ದೇಶದಾದ್ಯಂತ ಅಭಿಯಾನ ಪ್ರಾರಂಭವಾಗಿದ್ದು ಇದರ ಅಂಗವಾಗಿ ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ Arvind Bellad , ಶ್ರೀ Mahesh Tenginkai , ಶ್ರೀ M R Patil , ವಿಧಾನ ಪರಿಷತ್ ಸದಸ್ಯರಾದ ಶ್ರೀ ನವೀನ ಕೊಟ್ಟಿ, ಶ್ರೀ Pradeep Shettar , ಮಾಜಿ ಮುಖ್ಯಮಂತ್ರಿಗಳಾದ ಶ್ರೀ Jagadish Shettar , ಲೋಕಸಭಾ ಚುನಾವಣೆಯ ಧಾರವಾಡ ಜಿಲ್ಲಾ ಉಸ್ತುವಾರಿ ಶ್ರೀ ಎಮ್ ನಾಗರಾಜ್, ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಶ್ರೀ ನಿಂಗಪ್ಪ ಸುತ್ತಗಟ್ಟಿ ಹಾಗೂ ಪಾಲಿಕೆಯ ಸದಸ್ಯರು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.