Tel: +91 0836 2251055
10 March 2024
ಈ ಬಾರಿ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಯಾವ ಅಂಶಗಳು ಹೊಂದಿರಬೇಕು ಮತ್ತು ಈ ಬಗ್ಗೆ ಜನರ ಅಭಿಪ್ರಾಯ ಏನಿರಬಹುದು ಎಂದು ತಿಳಿದುಕೊಳ್ಳಲ್ಲು ದೇಶದಾದ್ಯಂತ ಅಭಿಪ್ರಾಯ ಸಂಗ್ರಹಣಾ ಅಭಿಯಾನ ಶುರುವಾಗಿದ್ದು ಇಂದು ನಮ್ಮ ಲೋಕಸಭಾ ಕ್ಷೇತ್ರದಲ್ಲೂ ಅಧಿಕೃತ ಚಾಲನೆ ನೀಡಲಾಯಿತು.
Narendra Modi ಅವರ ಕನಸು ವಿಕಸಿತ ಭಾರತ. ಈ ನಿಟ್ಟಿನಲ್ಲಿ ದೇಶದ ಜನತೆ ಕೂಡ ಮೋದಿಜಿ ಅವರ ಅಭಿವೃದ್ಧಿ ಹಾದಿಯಲ್ಲಿ ಸಾಗಲು ಕೈಜೋಡಿಸಬೇಕು. ಈ ಬಾರಿ ನಮ್ಮ ಪಕ್ಷದ ಪ್ರಣಾಳಿಕೆ ನಮ್ಮ ಜನರ ಅಭಿಪ್ರಾಯದ ಸಂಕುಲವಾಗಲಿದೆ ಎಂಬುದು ನಿಜಕ್ಕೂ ಸಂತಸದ ವಿಷಯ.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ Arvind Bellad , ಶ್ರೀ Mahesh Tenginkai , ಶ್ರೀ M R Patil , ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಹು – ಧಾ ಮಹಾನಗರ ಪಾಲಿಕೆಯ ಮಹಾ ಪೌರರಾದ ಶ್ರೀಮತಿ ವೀಣಾ ಭಾರದ್ವಾಡ ಹಾಗೂ ಪಾಲಿಕೆಯ ಸದಸ್ಯರು ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.