14 APRIL 2024

ಹುಬ್ಬಳ್ಳಿಯಲ್ಲಿ ಇಂದು ರಾಜಸ್ಥಾನಿ‌ ಜಾಗರೂಕ ಮಂಚ್ ವತಿಯಿಂದ ನಡೆದ ಸಭೆಯಲ್ಲಿ ಭಾಗವಹಿಸಿ, ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿ, ಮೇ 7 ರಂದು ನಡೆಯುವ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಪರ ಮತದಾನ ಮಾಡಿ ಮತ್ತೊಮ್ಮೆ ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದ ಸರಕಾರಕ್ಕೆ ಆಶೀರ್ವಾದ ಮಾಡುವಂತೆ ಕೋರಿದೆನು.

ರಾಷ್ಟ್ರದ ಹಿತವನ್ನೇ ಪ್ರಥಮ ಆಧ್ಯತೆಯಾಗಿ ಪರಿಗಣಿಸಿ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿ, ಭಾರತವನ್ನು ಜಗತ್ತಿನ ಐದನೇ ಅತೀ ದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿದ ರಾಷ್ಟ್ರವನ್ನಾಗಿಸಿದ ಮೋದಿಯವರ ಪರ ನಾವು ಸದಾ ಇರುತ್ತೇವೆ ಎಂದು ಭರವಸೆ ನೀಡಿದ ಜೈನ ಮತ್ತು ಮಾರವಾಡಿ‌ ಸಮಾಜದ ಬಾಂಧವರು, ಜಿಲ್ಲೆಯ ಪ್ರಗತಿಗೆ ಬಿಜೆಪಿಯನ್ನೇ ಬೆಂಬಲಿಸುವುದಾಗಿ ಘೋಷಿಸಿದರು.

ಸಭೆಯಲ್ಲಿ ಶಾಸಕರಾದ ಶ್ರೀ Mahesh Tenginkai , ಜಯಂತಿಲಾಲಜೀ ಪರಮಾರ್, ನರಪತ್ ಸಿಂಗ್ ಜೀ, ಉಕಚಂದ್ ಜೀ ಬಾಫನಾ, ಅಮಲೋಕ ಚಂದ್ರ ಜೀ ಬಾಗರೇಚ್, ಗುರಶಂಕರಜೀ ಮೋಟ್, ಭವರಲಾಲ್ ಜೀ ಆರ್ಯಾ, ಜೀತೇಂದ್ರ ಭಾಫನಾ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: