Tel: +91 0836 2251055
12 APRIL 2024
ಇಂದು ಹುಬ್ಬಳ್ಳಿಯಲ್ಲಿ ನಡೆದ ರಜಪೂತ, ಮರಾಠ ರಜಕ ಸಮಾಜದ ಪ್ರಮುಖರೊಂದಿಗಿನ ಸಭೆಯಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು.
ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಯಿಂದ ಹಿಡಿದು ಎಲ್ಲಾ ದೇಶದ್ರೋಹಿ ಕೃತ್ಯಗಳನ್ನು ಮಟ್ಟಹಾಕಲು ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದಲ್ಲಿ ನಮ್ಮ ಸರಕಾರ ಕಾನೂನಾತ್ಮಕವಾಗಿ ಕ್ರಮ ಕೈಗೊಂಡಿರುವ ಪರಿಣಾಮವಾಗಿ ಇಂದು ದೇಶ ಸುರಕ್ಷಿತವಾಗಿದೆ ಮತ್ತು ಜನರು ಶಾಂತಿಯಿಂದ ಜೀವಿಸುವಂತಾಗಿದೆ. ಬಡವರ ಏಳಿಗೆಗಾಗಿ ಶ್ರಮಿಸುತ್ತಿರುವ ಮೋದಿಯವರ ಕೈಬಲಪಡಿಸಲು ಸಭೆಯಲ್ಲಿ ನೆರೆದಿದ್ದ ರಜಪೂತ, ಮರಾಠ ರಜಕ ಸಮಾಜದ ಎಲ್ಲರು ತಮ್ಮ ಸಂಪೂರ್ಣ ಬೆಂಬಲವನ್ನು ಬಿಜೆಪಿ ಪಕ್ಷಕ್ಕೆ ಸೂಚಿಸಿದರು.
ಈ ಸಭೆಯಲ್ಲಿ ರಜಪೂತ, ಮರಾಠ ರಜಕ ಸಮಾಜದ ಪ್ರಮುಖರಾದ ಶ್ರೀಮತಿ ವಿದ್ಯಾ ಜಾವುರ, ಶ್ರೀ ಸುಭಾಸ ಸಿಂಗ ಜಮಾದಾರ, ಶ್ರೀ ವಿಷ್ಣು ಕೆಲಗೇರಿ, ಶ್ರೀ ಸತೀಶ್ ಸಂಕ್ಪಾಲ್, ಶ್ರೀ ಸಂಜಯ ಕಪಟ್ಕರ್, ಶ್ರೀ ಮಂಜುನಾಥ್ ಕಾಟ್ಕರ್, ಶ್ರೀಮತಿ ಲೀಲಾ ಮಂಜುನಾಥ್ ಕಾಟ್ಕರ್, ಶ್ರೀಮತಿ ಶೋಭಾ ಕಿಲ್ಲೇಧಾರ್, ಶ್ರೀ ನಾರಾಯಣಸಿಂಗ್, ಶ್ರೀ ಅಜಿತ್ ಸಿಂಗ್ ರಜಪೂತ್ ಹಾಗೂ ಸಮಾಜದ ಮುಖಂಡರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.