Tel: +91 0836 2251055
14 APRIL 2024
ರಾಷ್ಟ್ರೀಯ ಚಿಂತನೆ ಮತ್ತು ಧರ್ಮದ ರಕ್ಷಣೆ ವಿಚಾರವಾಗಿ ಯುವಕರನ್ನು ಒಗ್ಗೂಡಿಸಿ ವಿವಿಧ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವಂತಹ ಹುಬ್ಬಳ್ಳಿಯ ಭಗತ್ ಸಿಂಗ್ ಸೇವಾ ಸಂಘದ ಯುವ ಕಾರ್ಯಕರ್ತರೊಂದಿಗೆ ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವ ಮಿತ್ರರೊಂದಿಗೆ ವಿವಿಧ ವಿಚಾರಗಳ ಕುರಿತು ಅಭಿಪ್ರಾಯ ಹಂಚಿಕೊಳ್ಳಲಾಯಿತು.
ಭಗತ್ ಸಿಂಗ್ ಸೇವಾ ಸಂಘ ಜಿಲ್ಲೆ ಮಾತ್ರವಲ್ಲದೇ ರಾಜ್ಯ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ರಾಷ್ಟ್ರೀಯತೆಯ ವಿಚಾರವಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಸಾಮಾಜಿಕವಾಗಿಯೂ ಅನೇಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರೀಯತೆಗೆ ಒತ್ತು ನೀಡಿ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಇಂದು ನಡೆೆದ ಕಾರ್ಯಕ್ರಮದಲ್ಲಿ ಯುವ ಕಾರ್ಯಕರ್ತರೆಲ್ಲರೂ ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದು ಚುನಾವಣೆವರೆಗೂ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ತಾವು ಬಿಜೆಪಿ ಮತ್ತು ಮೋದಿಯವರ ಗೆಲುವಿಗಾಗಿ ಶ್ರಮಿಸುತ್ತೇವೆಂದು ಒಕ್ಕೊರಳಿನಿಂದ ಜೈಕಾರ ಕೂಗುವ ಮೂಲಕ ಬೆಂಬಲ ಸೂಚಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ Mahesh Tenginkai , ಭಗತ್ ಸಿಂಗ್ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ವಿಶಾಲ ಜಾದವ್, ಪ್ರಮುಖರು ಹಾಗೂ ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.