Tel: +91 0836 2251055
• ಧಾರವಾಡ ಜಿಲ್ಲೆಯಲ್ಲಿನ 2022ರ ಮುಂಗಾರು ಹಂಗಾಮಿನ ಕೆಂಪು ಮೆಣಸಿನಕಾಯಿ ಬೆಳೆಯ ಮಧ್ಯಂತರ ಬೆಳೆ ನಷ್ಟ ವಿಮಾ ಪರಿಹಾರವಾಗಿ
(Midseason Adversity claim) 20.69 ಕೋಟಿ ಹಣ ನೇರವಾಗಿರೈತರಖಾತೆಗೆ ಬಿಡುಗಡೆಯಾಗಲಿದೆ.
• ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆಯ 2022 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತೀವೃಷ್ಠಿಯಿಂದ ಹಾನಿಗೀಡಾಗಿದ್ದ ಆಲೂಗಡ್ಡೆ, ಕೆಂಪು ಮೆಣಸಿನಕಾಯಿ, ಹತ್ತಿ, ಗೋವಿನಜೋಳ ಹಾಗೂ ಶೆಂಗಾ ಬೆಳೆದ ರೈತರಿಗೆ ಮಧ್ಯಂತರ ವಿಮಾ ಪರಿಹಾರವಾಗಿ 63,609 ರೈತರಿಗೆ 57 ಕೋಟಿರೂ. ಬಿಡುಗಡೆ ಮಾಡಲಾಗಿದೆ.
• ಧಾರವಾಡಜಿಲ್ಲೆಯಲ್ಲಿನ 2018-19 ರ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ 1,939 ತಿರಸ್ಕೃತ ಪ್ರಕರಣಗಳನ್ನು ಪನಃ ಪರಿಗಣಿಸಿ ಜಿಲ್ಲೆಗೆ 4.32 ಕೋಟಿರೂ. ಬಿಡುಗಡೆ ಮಾಡಲಾಗಿದೆ.
• ಧಾರವಾಡದ ತರಕಾರಿ ಉತ್ಕೃಷ್ಟ ಕೇಂದ್ರವು ಕುಂಬಾಪುರ ತೋಟಗಾರಿಕಾ ಕ್ಷೇತ್ರದಲ್ಲಿ ಸ್ಥಾಪನೆಯಾಗಿದ್ದು, ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಸ್ರೇಲ್ ತಂತ್ರಜ್ಞಾನವನ್ನುರಾಜ್ಯದಲ್ಲಿ ಬಳಕೆ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಈ ಉತ್ಕೃಷ್ಟತೆ ಕೇಂದ್ರವನ್ನು ಸ್ಥಾಪನೆ ಮಾಡುತ್ತಿದೆ. ಧಾರವಾಡಜಿಲ್ಲೆಯಲ್ಲಿ ತರಕಾರಿ ಬೆಳೆಯ ಈ ಇಂಡೋ-ಇಸ್ರೇಲ್ ಉತ್ಕೃಷ್ಟತೆ ಕೇಂದ್ರವು 20 ಎಕರೆಜಾಗದಲ್ಲಿ ಸುಮಾರು 7.6 ಕೋಟಿ ವೆಚ್ಚದಲ್ಲಿ ನಿಮಾಣವಾಗಿದೆ.
• ಧಾರವಾಡದಲ್ಲಿ ಉತ್ತರ ಕರ್ನಾಟಕ ಕೃಷಿ ಹವಾಮಾನ ಹಾಗೂ ಸಂಶೋಧನಾಕೇಂದ್ರ ಸ್ಥಾಪನೆ. ಹುಬ್ಬಳ್ಳಿಯಲ್ಲಿ ಭಾರತೀಯ ಮಾನಕ ಬ್ಯೂರೋ ಕಛೇರಿ ಆರಂಭ.