14 APRIL 2024

“ಗಡಿ ನಾಡಿನಲ್ಲಿ ಮೊಳಗಿದ ಬಿಜೆಪಿ ಮತ್ತೊಮ್ಮೆ ಜೈಕಾರ”

ಇಂದು ಬೆಳಗಾವಿಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ Jagadish Shettar ಅವರೊಂದಿಗೆ ಪಾಲ್ಗೊಂಡು ಸಭೆಯನ್ನುದ್ದೇಶಿಸಿ ಮಾತನಾಡಿದೆನು.

ಮಹಿಳಾ ಸಬಲೀಕರಣ ಮೋದಿ ಸರ್ಕಾರದ ಬಹುದೊಡ್ಡ ಕನಸು. ಈ ದೇಶದ ಸ್ತ್ರೀ ಕುಲಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲಾ ಸ್ತ್ರೀಯರನ್ನು ಸಮಾನವಾಗಿ ಗೌರವಿಸುತ್ತಾ ಬಂದಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಕೂಡ ಜಾರಿಗೆ ತಂದಿದ್ದು ನಮ್ಮ ಬಿಜೆಪಿ ಸರ್ಕಾರವೇ. ಹಾಗಾಗಿ ನಮ್ಮ ದೇಶದ ಅಭಿವೃದ್ಧಿಗೆ ಇನ್ನು ಮುಂದೆ ದೇಶದ ಮಹಿಳೆಯರ ಕೊಡುಗೆ ವೃದ್ಧಿಸುತ್ತದೆ. ದೇಶದಲ್ಲಿ ಆಗಿರುವ ದೊಡ್ಡ ದೊಡ್ಡ ಬದಲಾವಣೆಗಳಿಗೆ ಮೋದಿಯವರ ಸಮರ್ಥ ನಾಯಕತ್ವವೇ ಕಾರಣ. ಹೀಗಾಗಿ Narendra Modi ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ನಾವೆಲ್ಲರೂ ಶ್ರಮಿಸಬೇಕು ಎಂದು ನೆರೆದಿದ್ದ ಎಲ್ಲಾ ತಾಯಂದಿರು, ಸಹೋದರಿಯರ ಬಳಿ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಸಂಸದರಾದ ಶ್ರೀಮತಿ Mangal Suresh Angadi, ಶಾಸಕರಾದ ಶ್ರೀ Abhay Patil , ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಹಾಂತೇಶ್ ಕವಟಗಿಮಠ, ರಾಜ್ಯ ಉಪಾಧ್ಯಕ್ಷರಾದ ಶ್ರೀ ಅನಿಲ್ ಬೆನಕೆ, ಜಿಲ್ಲಾಧ್ಯಕ್ಷರಾದ ಶ್ರೀಮತಿ ಗೀತಾ ಸುತಾರ, ಮಂಡಲಾಧ್ಯಕ್ಷರಾದ ಶ್ರೀ ಪ್ರಶಾಂತ್ ಕಂಗ್ರಾಲ್ಕರ್ ಹಾಗೂ ಪಕ್ಷದ ಪ್ರಮುಖರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#ಮೋದಿಮತ್ತೊಮ್ಮೆ

Tags: