Tel: +91 0836 2251055
4 APRIL 2024
“ಸಂಕಲ್ಪ ಮತ್ತು ಸಾಕಾರ – ಮತ್ತೊಮ್ಮೆ ಮೋದಿ ಸರಕಾರ”
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ಗಂಗಾಧರ ನಗರದ ಬಿಜೆಪಿ ಬೂತ್ ಅಧ್ಯಕ್ಷರಾದ ಶ್ರೀಧರ ಸಿಂಗನಹಳ್ಳಿಯವರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಪ್ರತಿಯೊಬ್ಬರ ಅಭಿಲಾಷೆಯೂ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಿ ರಾಷ್ಟ್ರವನ್ನು ಸದೃಢಗೊಳಿಸುವುದರ ಜೊತೆಗೆ ಕಳೆದ ಹತ್ತು ವರ್ಷಗಳ ಜನಪರ ಆಡಳಿತವನ್ನು ಮುಂದುವರಿಸುವುದೇ ಆಗಿದೆ.
ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದಲ್ಲಿ ದೇಶದಲ್ಲಾದ ಬದಲಾವಣೆ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದಲ್ಲಾದ ಅಭಿವೃದ್ಧಿಪರ ಕೆಲಸಗಳು ಜನರ ಕಣ್ಣ ಮುಂದಿದೆ ಮತ್ತು ನಾವು ಮಾಡಿದ ಕೆಲಸಗಳನ್ನೇ ಮುಂದಿಟ್ಟು ಜನರ ಬಳಿ ಮತ್ತೊಮ್ಮೆ ಆಶೀರ್ವಾದ ಪಡೆಯಲು ನಿಂತಿದ್ದು, ಜನರ ಪ್ರೀತಿ ಆಶೀರ್ವಾದ ಖಂಡಿತವಾಗಿಯೂ ಸಿಗಲಿದೆ ಎಂಬ ವಿಶ್ವಾಸವಿದೆ.
ಪ್ರಚಾರ ಸಭೆಯಲ್ಲಿ ಶಾಸಕ ಮಿತ್ರರಾದ ಶ್ರೀ Arvind Bellad , ಶ್ರೀ Mahesh Tenginkai , ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಮಾಜಿ ಶಾಸಕರಾದ ಶ್ರೀ ಅಶೋಕ ಕಾಟವೆ, ಪಕ್ಷದ ಪ್ರಮುಖರಾದ ಶ್ರೀ ಡಾ.ಕ್ರಾಂತಿಕಿರಣ್, ಶ್ರೀ ಶ್ರೀಧರ ಸಿಂಗನಹಳ್ಳಿ , ಶ್ರೀ ಶಶಿ ಬಿಜುವಾಡ, ಶ್ರೀ ಪ್ರಭು ನವಲಗುಂದಮಠ, ಶ್ರೀ ಶಿವು ಮೆಣಸಿನಕಾಯಿ, ಶ್ರೀ ಚಂದ್ರಶೇಖರ ಗೋಕಾಕ, ಶ್ರೀ ಬಸವರಾಜ ಅಮ್ಮಿನಬಾವಿ, ಶ್ರೀ ಯಮನೂರ ಜಾದವ್, ಶ್ರೀ ಶಶಿ ಬಿಜುವಾಡ ಹಾಗೂ ಹಿರಿಯರು ಪ್ರಮುಖರು ಉಪಸ್ಥಿತರಿದ್ದರು.