4 APRIL 2024

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕುಂದೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸಭೆ ಇಂದು ಬಂಕಾಪುರದಲ್ಲಿ ನಡೆಯಿತು. ಈ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆನು.

ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಆಡಳಿತದಲ್ಲಿ ಭಾರತದ ಭವ್ಯ ಇತಿಹಾಸವನ್ನು ಅಳಿಸಿ ಮುಂದಿನ ಪೀಳಿಗೆಗೆ ಅದರ ಬಗ್ಗೆ ಏನೂ ತಿಳಿಯದಂತೆ ತೃಣದ ಸಮಾನ ಮಾಡಿದ್ದ ಭಾರತವನ್ನು 2014 ರಿಂದ ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ನಮ್ಮ ರಾಷ್ಟ್ರದ ಇತಿಹಾಸ ಸಂಸ್ಕೃತಿ ಇವೆಲ್ಲವನ್ನು ಎತ್ತಿ ಹಿಡಿದಿದ್ದಲ್ಲದೆ ಭಾರತೀಯರ ಕನಸಾಗಿದ್ದ ರಾಮ ಮಂದಿರವನ್ನು ನನಸು ಮಾಡಿತು. ಇದರ ಜೊತೆಗೆ ಕ್ಷಿಪ್ರ ಗತಿಯಲ್ಲಿ ಅಭಿವೃದ್ಧಿಯನ್ನು ಸಾಧಿಸಿ ಇಡೀ ಜಗತ್ತೇ, ನಿಬ್ಬೆರಗಾಗುವಂತೆ ಮಾಡಿದೆ. ಈ ಸಾಧನೆ ಮುಂದುವರೆಸಲು ಬಿಜೆಪಿಯನ್ನು ಮತ್ತೊಮ್ಮೆ ಬಹುಮತದಿಂದ ಗೆಲ್ಲಿಸುವುದುಕ್ಕಾಗಿ ಶ್ರಮಿಸುವುದಾಗಿ ಕಾರ್ಯಕರ್ತರು ಬಿಜೆಪಿಗೆ ತಮ್ಮ ಬೆಂಬಲವನ್ನು ಸೂಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಶ್ರೀ Basavaraj Bommai , ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ಶಿವಾನಂದ ಮ್ಯಾಗೇರಿ, ಶ್ರೀ ಶಶಿಕಾಂತ ಯಲಿಗಾರ, ಶ್ರೀ ಶ್ರೀಕಾಂತ ದುಂಡಿಗೌಡ್ರ, ಶ್ರೀ ಮಹಾಲಿಂಗಪ್ಪ ಹಳವಳ್ಳಿ, ಶ್ರೀ ಡಿ ಎಸ್ ಮಾಳಗಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: