Tel: +91 0836 2251055
8 APRIL 2024
ಇಂದು ಹುಬ್ಬಳ್ಳಿಯಲ್ಲಿ ನಾಮದೇವ ಶಿಂಪಿ ಸಮಾಜದ ಪ್ರಮುಖರು ಮತ್ತು ಹಿರಿಯರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದೆನು.
ಭಾರತದಲ್ಲಿ ಅಭಿವೃದ್ಧಿಯ ಪರ್ವ ಕಳೆದ ದಶಕದಲ್ಲಿ ಭರದಿಂದ ಸಾಗುತ್ತಿದೆ. ದೇಶದ ಪ್ರತೀ ನಾಗರಿಕನಿಗೂ Narendra Modi ಸರ್ಕಾರ ಎಲ್ಲಾ ಸೌಲಭ್ಯಗಳನ್ನು ತಲುಪಿಸುವ ಕೆಲಸ ನಡೆದಿದೆ. ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಯೂ ದೇಶವಾಸಿಗಳ ಉನ್ನತಿಗಾಗಿಯೇ ರೂಪಿಸಿರುವುದು. ಮುಂಬರುವ ದಿನಗಳಲ್ಲಿ ದೇಶದಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಸಂಪೂರ್ಣ ತಯಾರಿ ಮೋದಿ ಸರ್ಕಾರ ಮಾಡಿದೆ. ಇದಕ್ಕಾಗಿ ನಾವೆಲ್ಲರೂ ಬಿಜೆಪಿಯನ್ನು ಗೆಲ್ಲಿಸಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಸಭೆಯಲ್ಲಿ ನಾಮದೇವ ಶಿಂಪಿ ಸಮಾಜದ ಸಂಪೂರ್ಣ ಬೆಂಬಲವನ್ನು ಕೋರಿದೆನು.
ಈ ಸಂದರ್ಭದಲ್ಲಿ ನಾಮದೇವ ಶಿಂಪಿ ಸಮಾಜದ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣ ಘೋರ್ಪಡೆ ಸಮಾಜದವ ಪ್ರಮುಖರಾದ ಶ್ರೀ ಕೃಷ್ಣ ಉರಣಕರ, ಶ್ರೀ ಬಸವರಾಜ ಬಗಾಡೆ, ಶ್ರೀ ಮುರಳೀಧರ ಹಾಸಲಕರ, ಶ್ರೀ ಬಸವರಾಜ ವಾಯಚಳ, ಶ್ರೀ ವಿವೇಕಾನಂದ ಹುಬ್ಬಳ್ಳಿ, ಶ್ರೀ ಸುರೇಶ ಬರಾಟಕ್ಕೆ ಹಾಗು ಕಾರ್ಯಕರ್ತರು ಪ್ರಮುಖರು ಉಪಸ್ಥಿತರಿದ್ದರು.