7 APRIL 2024

ನವಲಗುಂದ ವಿಧಾನಸಭಾ ಕ್ಷೇತ್ರದ ಅಳಗವಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು.

8 ಶಾಲಾ ಕೊಠಡಿಗೆ ಒಟ್ಟು ರೂ. 1.22 ಕೋಟಿ ಖಾಸಗಿ ಕಂಪನಿಗಳ CSR ಅನುದಾನಗಳನ್ನು ಬಿಡುಗಡೆ ಮಾಡಿಸಿದ್ದೇನೆ. ಈ ಕ್ಷೇತ್ರದಲ್ಲಿ ಸುಮಾರು 150ಕ್ಕಿಂತ ಹೆಚ್ಚು ಶಾಲಾ ಕೊಠಡಿಗಳನ್ನು ಖಾಸಗಿ ಕಂಪನಿಗಳಿಂದ ಕೊಡಿಸಿದ್ದೇನೆ. ನಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳ ಮಕ್ಕಳು ನೆಲದ ಮೇಲೆ ಕೂರಬಾರದೆಂದು ನಾನು ಸ್ವತಃ ಖಾಸಗಿ ಕಂಪನಿಗಳಿಂದ ಅನುದಾನ ಪಡೆದು 50೦೦೦ ಡೆಸ್ಕುಗಳನ್ನು ಒದಗಿಸಲು ಆಜ್ಞೆ ಮಾಡಿದೆ. 30000 ಡೆಸ್ಕುಗಳು ಈಗಾಗಲೇ ನಮ್ಮ ಕ್ಷೇತ್ರದ ಶಾಲೆಗಳಲ್ಲಿವೆ. ಇದರ ಜೊತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿದ್ದೇನೆ. ಕೊರೋನ ಸಮಯದಲ್ಲಿ ನಮ್ಮ ದೇಶವಾಸಿಗಳಿಗೆ ಉಚಿತ ಲಸಿಕೆ ಕೊಡಬೇಕೆಂಬ ಪ್ರತಿಜ್ಞೆಯನ್ನು ಪ್ರಧಾನಿ ಶ್ರೀ Narendra Modi ಅವರು ಮಾಡಿ ನಮ್ಮ ವಿಜ್ಞಾನಿಗಳಿಗೆ ಬೇಕಾದ ಎಲ್ಲಾ ಅನುಕೂಲವನ್ನು ಮಾಡಿಕೊಟ್ಟರು. ಅಂಥ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡು ಕೋಟ್ಯಾಂತರ ಸಾವುಗಳನ್ನು ತಪ್ಪಿಸಿದರು. ಭಾರತ ಮುನ್ನಡೆ ಸಾಧಿಸಲು ಇಂತಹ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೋದಿಯಂತಹ ಪ್ರಧಾನಿ ಇರಬೇಕು. ಅದಕ್ಕಾಗಿ ನಿಮ್ಮೆಲ್ಲರ ಬೆಂಬಲ ಆಶೀರ್ವಾದ ಮುಂದುವರಿಯಬೇಕು. ಇದಕ್ಕೆ ಒಪ್ಪಿದ ಕಾರ್ಯಕರ್ತರು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸುವುದಾಗಿ ಶಪಥ ಮಾಡಿ ನಮಗೆ ತಮ್ಮ ಬೆಂಬಲವನ್ನು ಸೂಚಿಸಿದರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ವೀರಭದ್ರಯ್ಯ ಹಿರೇಮಠ ಅವರು ವಹಿಸಿದ್ದು, ಮಾಜಿ ಸಚಿವರಾದ ಶ್ರೀ Shankar Patil Munenakoppa , ನರಗುಂದ ಶಾಸಕರಾದ ಶ್ರೀ C C Patil , ವಿಧಾನ ಪರಿಷತ್ ಸದಸ್ಯರಾದ ಶ್ರೀ Pradeep Shettar , ಮಂಡಲಾಧ್ಯಕ್ಷರಾದ ಶ್ರೀ ಶರಣಪ್ಪಗೌಡ ದಾನಪ್ಪಗೌಡ್ರ, ಮಾಜಿ ಸಚಿವರಾದ ಶ್ರೀ ಕೆ.ಎನ್.ಗಡ್ಡಿ, ಶ್ರೀ ಷಣ್ಮುಖ ಗುರಿಕಾರ, ಜೆಡಿಎಸ್ ಮುಖಂಡರಾದ ಶ್ರೀ ಬಿಬಿ ಗಂಗಾಧರಮಠ, ಶ್ರೀ ಸುರೇಶ ಗಾಣಿಗೇರ, ಶ್ರೀ ಬಸಣ್ಣ ಬೆಳವಣಿಕಿ, ಶ್ರೀ ಸುರೇಶ ಬಣವಿ, ಶ್ರೀ ಮಲ್ಲನಗೌಡ ರಾಟಿಮನಿ, ಶ್ರೀಮತಿ ಶಾಂತಕ್ಕ ನಿಡವಣಿ, ಶ್ರೀ ಗುರಪ್ಪ ಅವರಾದಿ, ಶ್ರೀ ಸಿದ್ದನಗೌಡ ಪಾಟೀಲ, ಶ್ರೀ ಜಿಎಂ ಸಂಕನಗೌಡ, ಶ್ರೀ ದೇವರಾಜ ದಾಡಿಬಾವಿ, ಹಾಗೂ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: