Tel: +91 0836 2251055
26 APRIL 2024
“ನವಲಗುಂದದ ಬಿಸಿಲಿನಲ್ಲಿ ಪ್ರಕಾಶಿಸಿದ ಕೇಸರಿ ಪಡೆ”
ಇಂದು ಶಿರಹಟ್ಟಿ ಶ್ರೀ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನಮಠದ 13ನೇ ಪೀಠಾಧಿಪತಿಗಳಾದ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಫಕೀರ ಸಿದ್ದರಾಮ ಮಹಾಸ್ವಾಮಿಗಳನ್ನು ಭೇಟಿ ಮಾಡಿ, ಅವರ ಆಶೀರ್ವಾದ ಪಡೆದು ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಭದ್ರಾಪೂರ, ಮಣಕವಾಡ, ಶಿಶ್ವಿನಹಳ್ಳಿ, ಬಲ್ಲರವಾಡ ಮತ್ತು ನಾಗರಹಳ್ಳಿ ಗ್ರಾಮಗಳಲ್ಲಿ ನಡೆದ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು. ಪ್ರಧಾನಮಂತ್ರಿ ಶ್ರೀ Narendra Modi ಅವರ ನಾಯಕತ್ವದಲ್ಲಿ ಭಾರತವು 5ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ಸಾಮಾನ್ಯ ಜನರಿಗಾಗಿ ಮೂಲಸೌಕರ್ಯ ಅಭಿವೃದ್ಧಿಯಾಗಿದೆ ಹಾಗೂ ರಾಷ್ಟ್ರೀಯ ಭದ್ರತೆಯೂ ಸುಧಾರಿಸಿದೆ. ಭಾರತದ ಈ ಸರ್ವತೋಮುಖ ಏಳಿಗೆ ಹೀಗೆ ಮುಂದುವರೆಯಲು ನಾವು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ, ಶ್ರೀ ನರೇಂದ್ರ ಮೋದಿಯವರನ್ನು ಮೂರನೇ ಅವಧಿ ಪ್ರಧಾನಿಯನ್ನಾಗಿಸೋಣವೆಂದು ಮತಯಾಚಿಸಿದೆನು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ Shankar Patil Munenakoppa , ಶ್ರೀ ಷಣ್ಮುಖ ಗುರಿಕಾರ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಅಂಗಡಿ, ಶ್ರೀ ಚಂಬಣ್ಣ ಅಕ್ಕಿ, ಶ್ರೀ ಸಿಸಿ ಅಕ್ಕಿ, ಶ್ರೀ ಮಂಜುನಾಥ ಅಕ್ಕಿ, ಶ್ರೀ ಮಲ್ಲಿಕಾರ್ಜುನ ದೇಸಾಯಿ, ಮುಖಂಡರಾದ ಶ್ರೀ ಸಿದ್ದನಗೌಡ್ರ ಪಾಟೀಲ್, ಶ್ರೀ ಲಿಂಗಯ್ಯ ಬಣ್ಣದನೂರುಮಠ, ಶ್ರೀ ಕಲ್ಲಯ್ಯ ಪುರದಣ್ಣನವರ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.