Tel: +91 0836 2251055
30 APRIL 2024
ಧಾರವಾಡ 71 ಮತಕ್ಷೇತ್ರದ ಅಮ್ಮಿನಬಾವಿ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಮಂಗಳವಾರದಂದು ನಡೆದ ಕಾರ್ಯಕರ್ತರ ಸಭೆಯಲ್ಲಿ ನನ್ನ ಪರವಾಗಿ ವಿಜಯಪುರ ಶಾಸಕ Basanagouda Patil Yatnal ಅವರು ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಕರೊನಾ ಲಸಿಕೆ ಹಾಕಸಿಕೊಳ್ಳಬೇಡಿ ಎಂದು ಹೇಳಿದ ಕಾಂಗ್ರೆಸ್ ಮುಖಂಡರು ಕಳ್ಳರ ಹಾಗೆ ರಾತ್ರಿ ಹೋಗಿ ಲಸಿಕೆ ಹಾಕಿಸಿಕೊಂಡಿದ್ದಾರೆ.
ನಮ್ಮ ದೇಶ ಸುರಕ್ಷಿತ ಇರಬೇಕಾದರೆ ಶ್ರೀ Narendra Modi ಅವರು ಪ್ರಧಾನಿಯಾಗಬೇಕು, ಸಮಾಜದ ಜನರಿಗೆ ತಪ್ಪು ದಾರಿ ತೋರಿಸಿ ಸುಳ್ಳು ಭರವಸೆ ಕಾಂಗ್ರೆಸ್ ನೀಡುತ್ತಿದೆ. ಅಂತವರನ್ನು ಸಮೀಪ ಸೇರಿಸಿಕೊಳ್ಳಬೇಡಿರಿ, ಜಾತಿ ಜಾತಿಗಾಗಿ ಜಗಳಬೇಡ ದೇಶದ ಭವಿಷ್ಯ ಬರೆಯುವ ದಿನವಿದು, ದೇಶ ಉಳಿಸಿಕೊಳ್ಳಲು ಜನರಿಗೆ ಮೋದಿಜಿಯವರು ಬೇಕಾಗಿದ್ದಾರೆ ಅಂತಹ ಮಹಾನ್ ವ್ಯಕ್ತಿಯನ್ನು ವಿಶ್ವಗುರು ಮಾಡಲು ಮತದಾರರು ಪ್ರತಿಜ್ಞೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ Amrut Desai , ಶ್ರೀಮತಿ Seema Ashok Masuti , ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕಾ ಅವಿನಾಶ್, ಪ್ರಮುಖರಾದ ಶ್ರೀ ಜಯಕೀರ್ತಿ ಕಟ್ಟಿ, ಶ್ರೀ ಪಿ ಎಚ್ ನೀರಲಕೇರಿ, ಶ್ರೀ ಗಂಗಾಧರ ಪಾಟೀಲ ಕುಲಕರ್ಣಿ, ಬಿಜೆಪಿ ಪಕ್ಷದ ಧಾರವಾಡ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ,ಗ್ರಾಮೀಣ ಉಪಾಧ್ಯಕ್ಷ ನಿಜನಗೌಡ ಪಾಟೀಲ,ತಾಲೂಕಾ ಅಧ್ಯಕ್ಷ ರುದ್ರಪ್ಪ ಅರವಾಳ, ಗುರುನಾಥ ಗೌಡ್ರು, ಸುನೀಲ ಗುಡಿ, ಸಂಗನಗೌಡ ರಾಮನಗೌಡ್ರ, ಸಂತೋಷ ಪಾಟೀಲ, ಸಹದೇವ ಹಾವೇರಿಪೇಟೆ, ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಮತದಾರ ಬಂಧುಗಳು ಉಪಸ್ಥಿತರಿದ್ದರು.