12 APRIL 2024

ಇಂದು ಹುಬ್ಬಳ್ಳಿಯ ಎರಡೆತ್ತಿನ ಮಠಕ್ಕೆ ಭೇಟಿ ನೀಡಿ ಶ್ರೀ ಮ.ನಿ.ಪ್ರ.ಗುರು ಸಿದ್ಧಲಿಂಗೇಶ್ವರ ಸ್ವಾಮಿಗಳ ಆಶೀರ್ವಾದ ಪಡೆದು, ರುದ್ರಾಕ್ಷಿ ಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳನ್ನು ಭೇಟಿಯಾಗಿ,ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದಲ್ಲಾದ ಅಭಿವೃದ್ಧಿ ಯೋಜನೆಗಳ ಕುರಿತ ರಿಪೋರ್ಟ್ ಕಾರ್ಡ್ ಪುಸ್ತಕವನ್ನು ಶ್ರೀಗಳಿಗೆ ನೀಡಿ ಆಶೀರ್ವಾದ ಪಡೆದೆನು. ಮತ್ತು ಶ್ರೀ ಗುರು ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದೆನು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಅಶೋಕ ಕಾಟವೆ, ಪ್ರಮುಖರಾದ ಶ್ರೀ ಯಮನೂರ ಜಾದವ, ಶ್ರೀ ಪ್ರಭು ನವಲಗುಂದ, ಶ್ರೀ ಬಸವರಾಜ್ ಅಮ್ಮಿನಬಾವಿ, ಶ್ರೀ ಅನೂಪ್ ಬಿಜವಾಡ,ಶ್ರೀ ಚನ್ನು ಹೊಸಮನಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.

#DharwadMPConstituency

#DharwadPride

Tags: