Tel: +91 0836 2251055
31 March 2024
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಧಾರವಾಡ ತಾಲೂಕಿನ ನರೇಂದ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆನು.
ಈ ಲೋಕಸಭಾ ಚುನಾವಣೆ ವಿಕಸಿತ ಭಾರತದ ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದೆ. ಪ್ರಧಾನಿ Narendra Modi ಅವರು ಅಧಿಕಾರ ವಹಿಸಿಕೊಂಡ ನಂತರ ಭಾರತದ ಅಭಿವೃದ್ಧಿ ತನ್ನ ದಿಕ್ಕನ್ನೇ ಬದಲಿಸಿದೆ. ನವ ಭಾರತವನ್ನು ನಿರ್ಮಾಣ ಮಾಡಿರುವ ಮೋದಿಯವರು ಮುಂದಿನ ಅವಧಿಯಲ್ಲಿ ದೇಶದ ಶ್ರೇಷ್ಠ ಇತಿಹಾಸವನ್ನು ರಚಿಸಲಿದ್ದಾರೆ, ಹಾಗಾಗಿ ನಾವೆಲ್ಲರೂ ನವ ಭಾರತದ ಅಭಿವೃದ್ದಿಗೆ ಒಟ್ಟಾಗಿ ಹೆಜ್ಜೆ ಹಾಕಬೇಕು. ನರೇಂದ್ರ ಮೋದಿಯವರ ನಾಯಕತ್ವದ ಕೇಂದ್ರ ಸರ್ಕಾರದ ಆಡಳಿತವನ್ನು ಮತ್ತು ಬಿಜೆಪಿ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಅನ್ಯ ಪಕ್ಷದ ಕಾರ್ಯಕರ್ತರು ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶ್ರೀ Amrut Desai , ಶ್ರೀಮತಿ Seema Ashok Masuti , ಬಿಜೆಪಿ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ, ಪ್ರಮುಖರಾದ ಶ್ರೀ ಶಂಕರ ಮುಗದ, ಮಂಡಲ ಅಧ್ಯಕ್ಷರಾದ ಶ್ರೀ ರುದ್ರಪ್ಪ ಅರಿವಾಳ, ಶ್ರೀ ನಾಗರಾಜ್ ಗಾಣಿಗೇರ್, ಶ್ರೀ ಶಶಿಮೌಳಿ ಕುಲಕರ್ಣಿ, ಶ್ರೀ ಪ್ರೇಮಾ ಕೊಮಾರ ದೇಸಾಯಿ, ಶ್ರೀ ಜಯತೀರ್ಥ ಕಟ್ಟಿ, ಶ್ರೀ ಮಹದೇವ ದಂಡಿನ್, ಶ್ರೀ ಶಿವು ಹಿರೇಮಠ್, ಶ್ರೀ ನಿಜ್ಜನಗೌಡ ಪಾಟೀಲ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗರಾಜ್ ಹೊಟ್ಟಿಹೋಳಿ, ಶ್ರೀ ಚನ್ನವೀರ ಗೌಡ ಪಾಟೀಲ್, ಶ್ರೀ ಶಂಕರ್ ಕೊಮಾರ್ ದೇಸಾಯಿ ಹಾಗು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.