17 March 2024

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಇಂದು ಧಾರವಾಡ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಕಲಘಟಗಿ ವಿಧಾನಸಭಾ ಕ್ಷೇತ್ರದ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿ, ಚುನಾವಣಾ ಪೂರ್ವ ತಯಾರಿಯ ಬಗ್ಗೆ ಚರ್ಚಿಸಲಾಯಿತು.

ಚುನಾವಣೆ ಯಾವುದೇ ಇರಲಿ, ಪ್ರತೀ ಚುನಾವಣೆಯಲ್ಲೂ ಭಾರತೀಯ ಜನತಾ ಪಕ್ಷಕ್ಕೆ ಅತೀ ಹೆಚ್ಚು ಮತ ನೀಡುವ ಮೂಲಕ ಆಶೀರ್ವಾದ ಮಾಡಿದ ಕ್ಷೇತ್ರ ಕಲಘಟಗಿ. ಪಕ್ಷದ ಪರ ಮತ್ತು ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಕಲಘಟಗಿಯ ಕಾರ್ಯಕರ್ತರ ಉತ್ಸಾಹ ಹುಮ್ಮಸ್ಸು ಎಲ್ಲರಿಗೂ ಪ್ರೇರಣಾದಾಯಿ. ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರು, ದೇಶದ ಹಿತ ದೃಷ್ಟಿಯಿಂದ ಭಾರತೀಯ ಜನತಾ ಪಕ್ಷವನ್ನೇ ಆರಿಸುವ ಸಂಕಲ್ಪ ಮಾಡಿದ್ದು, ಇದೇ ಸಂದರ್ಭದಲ್ಲಿ ಬಿಜೆಪಿಯ ತತ್ವ ಸಿದ್ಧಾಂತ ಮತ್ತು ಮೋದಿಯವರ ಆಡಳಿತ ವೈಖರಿ ಒಪ್ಪಿ 40ಕ್ಕೂ ಹೆಚ್ಚು ಅನ್ಯ ಪಕ್ಷದ ಕಾರ್ಯಕರ್ತರು ಬಿಜೆಪಿ‌ ಸೇರ್ಪಡೆಗೊಂಡರು.

ಸಭೆಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ Nagaraj Chebbi , ಜಿಲ್ಲಾಧ್ಯಕ್ಷರಾದ ಶ್ರೀ ನಿಂಗಪ್ಪ ಸುತಗಟ್ಟಿ, ಜಿಲ್ಲಾ ಚುನಾವಣಾ ಉಸ್ತುವಾರಿ ಎಂ.ನಾಗರಾಜ, ಪಕ್ಷದ ಪ್ರಮುಖರಾದ ಶ್ರೀ ಬಸವರಾಜ್ ಕುಂದಗೋಳಮಠ, ಶ್ರೀ ಈರಣ್ಣ ಜಡಿ ಹಾಗೂ ಪ್ರಮುಖರು ಹಿರಿಯರು ಉಪಸ್ಥಿತರಿದ್ದರು.

#BJPForIndia

#AbkiBaar400Paar

#PhirEkBaarModiSarkar

#DharwadMPConstituency

Tags: