18 March 2024

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಇಂದು ಧಾರವಾಡ ಗ್ರಾಮೀಣ -71 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಹಾಗೂ ಪಕ್ಷದ ಪ್ರಮುಖರ ಸಭೆ ನಡೆಸಿ, ಚುನಾವಣಾ ತಯಾರಿಯ ಕುರಿತು ಚರ್ಚಿಸಲಾಯಿತು.

ಪಕ್ಷದ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದು, ದೇಶದ ರಕ್ಷಣೆಗೆ ಪ್ರಧಾನಮಂತ್ರಿ ಶ್ರೀ Narendra Modi ಅವರ ಕೈಬಲಪಡಿಸುವ ಸಲುವಾಗಿ ನಡೆಯುವ ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸುವ ಗುರಿ ಹೊಂದಿದ್ದು, ಕಾರ್ಯಕರ್ತರೆಲ್ಲರೂ ಜೊತೆಗೂಡಿ ಯಾವ ರೀತಿ ಪ್ರಚಾರ ಕಾರ್ಯ ಮಾಡಬಹುದು ಎಂಬುದನ್ನು ಸವಿಸ್ತಾರವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಮಾಜಿ ಶಾಸಕರಾದ ಶ್ರೀ Amrut Desai , ಶ್ರೀ Seema Ashok Masuti , ಜಿಲ್ಲಾಧ್ಯಕ್ಷರಾದ ಶ್ರೀ ನಿಂಗಪ್ಪ ಸುತ್ತಗಟ್ಟಿ, ಪಕ್ಷದ ಪ್ರಮುಖರಾದ ಶ್ರೀ ಬಸವರಾಜ್ ಕುಂದಗೋಳಮಠ, ಶ್ರೀ Iresh Anchatgeri , ಶ್ರೀ ಜಯತೀರ್ಥ ಕಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

#ಮೋದಿಮತ್ತೊಮ್ಮೆ

#PhirEkBaarModiSarkar

#DharwadMPConstituency

Tags: