25 APRIL 2024

ಇಂದು ಧಾರವಾಡದ ವಾರ್ಡ್ ನಂ 8 ಪರಪ್ಪನ ಕ್ರಾಸ್ ನಲ್ಲಿ ನಡೆದ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮತ ಯಾಚಿಸಲಾಯಿತು.

ಪ್ರಧಾನಮಂತ್ರಿ ಶ್ರೀ Narendra Modi ಅವರಿಗೆ ಬಡವರೆಂದರೆ ಎಲ್ಲ ಸಮುದಾಯದ ಬಡವರು, ಅಭಿವೃದ್ಧಿ ಎಂದರೆ ಸರ್ವತೋಮುಖ ಅಭಿವೃದ್ಧಿ. ಈ ಮನೋಭಾವದಿಂದ ಸರ್ವ ಸಮುದಾಯಗಳ ಅಭಿವೃದ್ಧಿಗಾಗಿ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಕಲ್ಲು ಬಾಂಬುಗಳು ತೂರಾಡುತ್ತಿದ್ದ ಕಾಶ್ಮೀರವನ್ನು ನಿಜವಾಗಿಯೂ ಶಾಂತಿವನ ಮಾಡಿದ್ದಾರೆ. ಮೈಲಿಗಟ್ಟಲೆ ನೀರಿಗಾಗಿ ಬಿಂದಿಗೆ ಹಿಡಿದು ಅಲೆಯ ಬೇಕಾಗಿದ್ದ ಪರಿಸ್ಥಿತಿಯನ್ನು ಸುಧಾರಿಸಿ, ಮನೆಗಳ ನಳದಲ್ಲಿ ನೀರು ಬರುವಂತೆ ಮಾಡಿದ್ದಾರೆ. ಹೆಣ್ಣುಮಕ್ಕಳಿಗೆ ಸೌದೆ ಒಲೆಯಿಂದ ಮುಕ್ತಿ ನೀಡಿ ಗ್ಯಾಸ್ ಸಂಪರ್ಕ ಒದಗಿಸಿದ್ದಾರೆ. ಇಂತಹ ನೈಜ ಅಭಿವೃದ್ಧಿ ಕಾಣಲು ಸಾಧ್ಯವಾಗುವುದು ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾದಾಗ ಮಾತ್ರ. ನಾವೆಲ್ಲರೂ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಿ, ಮೋದಿಯವರನ್ನು ಪ್ರಧಾನಿಯನ್ನಾಗಿಸೋಣವೆಂದುದೃಢ ಸಂಕಲ್ಪ ಮಾಡಬೇಕಿದೆ.

ಇಂದಿನ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶ್ರೀ Amrut Desai , ಶ್ರೀಮತಿ Seema Ashok Masuti ಸೇರಿದಂತೆ ಶ್ರೀ ಬಂಡೆಪ್ಪ ಕಾಶಂಪುರ, ಶ್ರೀ ಬಿಬಿ ಗಂಗಾಧರ, ಶ್ರೀ ಗುರುರಾಜ ಹುಣಸಿಮರದ, ಶ್ರೀ ವೀರಭದ್ರಪ್ಪ ಹಾಲಹರವಿ, ಹಾಗೂ ಚಾರಿ ಬಸವೇಶ್ವರ ಟ್ರಸ್ಟ್ ನ ಪ್ರಮುಖರು ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: