Tel: +91 0836 2251055
25 APRIL 2024
ಇಂದು ಧಾರವಾಡದ ವಾರ್ಡ್ ನಂ 4 ಮಹಾಂತನಗರದಲ್ಲಿ ನಡೆದ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮತ ಯಾಚಿಸಲಾಯಿತು.
ವಿಕಸಿತ ಭಾರತ ಆಗುವುದರ ಜೊತೆಗೆ ಆರೋಗ್ಯವಂತ ಭಾರತವನ್ನು ನಿರ್ಮಿಸಬೇಕೆಂದು ಪ್ರಧಾನಮಂತ್ರಿ ಶ್ರೀ Narendra Modi ಅವರು ಆಯುಷ್ಮಾನ್ ಭಾರತ ಯೋಜನೆ ಜಾರಿಗೆ ತಂದರು. ಜನೌಷಧಿ ಕೇಂದ್ರಗಳನ್ನು ನಿರ್ಮಿಸಿ ಕಡು ಬಡವರಿಗೂ ಕೈಗೆಟಕುವ ಬೆಲೆಯಲ್ಲಿ ಔಷಧಿಗಳು ಸಿಗುವಂತೆ ಮಾಡಿದರು. ಭಾರತದಲ್ಲಿ ಇಂತಹ ಪರಿವರ್ತನೆ ಆದದ್ದು ಇದೇ ಮೊದಲು. ಇಂತಹ ಮಹತ್ತರ ಯೋಜನೆಯಡಿಯಲ್ಲಿ ಬರೀ ನಮ್ಮ ಧಾರವಾಡ ಕ್ಷೇತ್ರದಲ್ಲೇ ಸರಿಸುಮಾರು 5.5 ಲಕ್ಷದಷ್ಟು ಫಲಾನುಭವಿಗಳಿದ್ದಾರೆ. ದೇಶದ ಮೂಲೆಮೂಲೆಯಲ್ಲಿ ಮೋದಿಯವರು ಜಾರಿಗೊಳಿಸಿರುವ ಅನೇಕ ಯೋಜನೆಗಳ ಫಲಾನುಭವಿಗಳಿದ್ದು ಅವರೆಲ್ಲ ಮೋದಿಯವರ ಬೆಂಬಲಿಗರಾಗಿದ್ದಾರೆ. ದೇಶವಾಸಿಗಳನ್ನು ತನ್ನ ಪರಿವಾರ ಎಂದು ಕರೆಯುವ ಏಕೈಕ ಪ್ರಧಾನಿ ಶ್ರೀ ನರೇಂದ್ರ ಮೋದಿ. ಇವರ ಕೈಯಲ್ಲಿ ನಮ್ಮ ದೇಶ ಸುಭದ್ರ, ಸುಭಿಕ್ಷ ಹಾಗೂ ಸುಂದರ. ಇವರನ್ನು ಮತ್ತೆ ಪ್ರಧಾನಿಯನ್ನಾಗಿಸೋಣ. ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸೋಣವೆಂದು ದೃಢ ಸಂಕಲ್ಪ ಮಾಡೋಣ.
ಇಂದಿನ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶ್ರೀ Amrut Desai , ಶ್ರೀಮತಿ Seema Ashok Masuti , ಪ್ರಮುಖರಾದ ಶ್ರೀ ನಿತಿನ್ ಇಂಡಿ, ಶ್ರೀ ಈರೇಶ್ ಅಂಚಟಗೇರಿ, ಶ್ರೀ ಜಯತೀರ್ಥ ಕಟ್ಟಿ, ಶ್ರೀ ಸುನಿಲ್ ಮೋರೆ, ಶ್ರೀ ಈರಣ್ಣ ಹಪ್ಪಲ್ಲಿ, ಟಿ ಎಸ್ ಪಾಟೀಲ್ ಹಾಗು ಪ್ರಮುಖರು ಮುಖಂಡರು ಕಾರ್ಯಕರ್ತರು ಹಾಗು ಊರ ಹಿರಿಯರು ಉಪಸ್ಥಿತರಿದ್ದರು.