29 APRIL 2024

ಇಂದು ಧಾರವಾಡದ ಲಕಮಾಪುರ, ಶಿಬಾರಗಟ್ಟಿ, ಯಾದವಾಡ ಹಾಗೂ ಲೋಕೂರು ಗ್ರಾಮಗಳಲ್ಲಿ ನಡೆದ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು. ಬರೀ ಆಮದು ಮಾಡಿಕೊಳ್ಳುವುದಕ್ಕೆ ಮಹತ್ವ ಕೊಡುತ್ತಿದ್ದ ಕಾಲ 2014ಕ್ಕೆ ಮುಗಿಯಿತು. ಯಾಕೆಂದರೆ ಶ್ರೀ Narendra Modi ಅವರು ಪ್ರಧಾನಿಯಾದ ಮೇಲೆ ದೇಶದ ಅಭಿವೃದ್ಧಿ ದೇಶವಾಸಿಗಳ ಅಭಿವೃದ್ಧಿಯಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯಿಂದ, ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಪರಿಚಯಿಸಿದರು. ಈ ಅಭಿಯಾನದಡಿ ಕುಶಲಕರ್ಮಿಗಳನ್ನು ಉತ್ತೇಜಿಸಿದರು. ಭಾರತದಲ್ಲೇ ಉತ್ಪನ್ನಗಳನ್ನು ತಯಾರಿಸಿ ರಫ್ತು ಮಾಡುವ ಮಟ್ಟಿಗೆ ಬೆಳೆದಿದ್ದೇವೆ. ಅಮೇರಿಕಾ ಅಧ್ಯಕ್ಷರು ಮೋದಿಯವರಿಗೆ ಔತಣ ಏರ್ಪಡಿಸಿದ್ದಾಗ, ಕರ್ನಾಟಕದ ಸಿರಿಧಾನ್ಯಗಳ ರಸದೌತಣ ತಯಾರಿಸಿದ್ದರು. ಅಷ್ಟೇ ಅಲ್ಲ ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಸಂಪನ್ಮೂಲ ನಮ್ಮಲ್ಲೇ ಸಾಕಷ್ಟಿದ್ದರೂ, ಇದುವರೆಗೂ ಬರೀ ಆಮದು ಮಾಡಲಾಗುತ್ತಿತ್ತು. ಆದರೀಗ ಮೋದಿಯವರ ಸೂಚನೆಯ ಮೇರೆಗೆ ನಾವು ಕಲ್ಲಿದ್ದಲು ಆಮದನ್ನು ಸಂಪೂರ್ಣ ನಿಲ್ಲಿಸಲು ಯೋಜನೆಗಳನ್ನು ಹಾಕಿದ್ದೇವೆ. ಇದರಿಂದಾಗಿ ದೇಶದ ಮೇಲಿನ ಎಷ್ಟೋ ಹೊರೆ ಕಮ್ಮಿಯಾಗಿದೆ. ಇಂತಹ ಪ್ರಬುದ್ಧ ನಿರ್ಧಾರಗಳನ್ನು ಕೈಗೊಂಡು ದೇಶವನ್ನು ಮುನ್ನಡೆಸುವ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸೋಣ. ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸೋಣ.

ಇಂದಿನ ಸಭೆಯಲ್ಲಿ ಮಾಜಿ ಶಾಸಕರಾದ ಶ್ರೀ Amrut Desai , ಶ್ರೀಮತಿ Seema Ashok Masuti , ಶ್ರೀಮತಿ ಸವಿತಾ ಅಮರಶೆಟ್ಟಿ, ಶ್ರೀ ನಿಜನಗೌಡ್ರ, ಶ್ರೀ ಗುರುಗೌಡ್ರ, ಶ್ರೀ ಶಂಕರ ಮುಗದ, ಶ್ರೀ ನರಸಿಂಗನವರ್, ಶ್ರೀ ಸುನೀಲ್ ಗುಡಿ, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: