Tel: +91 0836 2251055
12 APRIL 2024
ಇಂದು ಧಾರವಾಡದಲ್ಲಿ ನಗರದ ಪ್ರಬುದ್ಧರು ಮತ್ತು ಶಿಕ್ಷಣ ಪ್ರೇಮಿಗಳೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ವಿವಿಧ ವಿಚಾರಗಳ ಕುರಿತು ಸಂವಾದ ನಡೆಸಲಾಯಿತು.
ಯುಪಿಎ ಕಾಲದ ಹತ್ತು ವರ್ಷದಲ್ಲಿ ಪ್ರತಿ ಸೆಷನ್ ಮುನ್ನ ಒಂದು ಸ್ಕ್ಯಾಮ್ ಆಗಿತ್ತು, 12 ಲಕ್ಷ ಕೋಟಿ ಮೊತ್ತದ ಹಗರಣಗಳು ಆಗಿದ್ದವು. ಅದರಲ್ಲೂ ನಾನು ವಹಿಸಿಕೊಂಡಿದ್ದ ಕಲ್ಲಿದ್ದಲು ಸಚಿವಾಲಯದಲ್ಲೇ ಅತಿ ಹೆಚ್ಚು ಹಗರಣ ಆಗಿದ್ದದ್ದು, 2 ಲಕ್ಷ ಕೋಟಿಗೂ ಮೀರಿದ ಕಲ್ಲಿದ್ದಲು ಹಗರಣ ಅದು.ಇಂಥ ವರಸೆಯಿಂದಲೇ ಜಗತ್ತಿನಲ್ಲಿ ಭಾರತಕ್ಕೆ ಗೌರವ ಕಮ್ಮಿ ಇತ್ತು. ಆದರೆ ನಾನು ಕಲ್ಲಿದ್ದಲು ಸಚಿವನಾದಾಗ ಪ್ರಧಾನಿ Narendra Modi ಅವರು ನನಗೊಂದು ಮಾತನ್ನು ಹೇಳಿದರು. ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತೇವೆ, ಅದಕ್ಕೊಂದು ಅರ್ಥ ಇದೆ. ಆದರೆ ನಮ್ಮಲ್ಲೇ ಹೇರಳವಾಗಿರುವ ಕಲ್ಲಿದ್ದಲನ್ನು ನಾವು ಆಮದು ಮಾಡಿಕೊಳ್ಳುವುದು ಭಾರತಕ್ಕೆ ನಾವು ಮಾಡುವ ಪಾಪ ಎಂದು ಹೇಳಿದರು. ಆ ಮಾರ್ಗದರ್ಶನದಂತೆ ನಾನು ಅಧಿಕಾರ ವಹಿಸಿಕೊಂಡಾಗ 600 ಮಿಲಿಯನ್ ಟನ್ ಇದ್ದ ಕಲ್ಲಿದ್ದಲು ಉತ್ಪಾದನೆ ಈಗ 1040 ಮಿಲಿಯನ್ ಟನ್ ಅಂದರೆ 1 ಬಿಲಿಯನ್ ಟನ್ ದಾಟಿದೆ. 2025 ರಿಂದ ಕಲ್ಲಿದ್ದಲು ಆಮದನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿ ಮಾತು ಕೊಡುತ್ತೇನೆ. ಭಾರತಕ್ಕೆ ಇಂತಹ ಏಳಿಗೆಯಾಗಲು ಬಿಜೆಪಿ ಬಹುಮತದಿಂದ ಗೆಲ್ಲಬೇಕು ಮತ್ತು ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಬೇಕು.
ಈ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆಯ ಅಧ್ಯಕ್ಷರಾದ ಶ್ರೀ Dr Prabhakar B Kore , ಶಾಸಕರಾದ ಶ್ರೀ Arvind Bellad , ಕೆಎಲ್ಇ ಸಂಸ್ಥೆಯ ಹಿರಿಯ ಸದಸ್ಯರಾದ ಶ್ರೀ ಶಂಕ್ರಣ್ಣ ಮುನವಳ್ಳಿ, ಜೆಎಸ್ಎಸ್ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಅಜಿತ್ ಪ್ರಸಾದ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ಎಂ. ಎಂ. ಕವಟಗಿಮಠ, ಶ್ರೀ ಲಕ್ಷ್ಮಣ್ ಉಪ್ಪಾರ, ಶ್ರೀ ಎಸ್ ಆರ್ ರಾಮನಗೌಡ್ರ, ಶ್ರೀ ಸಿ ಎಸ್ ಪಾಟೀಲ್ ಹಾಗೂ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.