Tel: +91 0836 2251055
11 APRIL 2024
ಇಂದು ಹುಬ್ಬಳ್ಳಿಯಲ್ಲಿ ನಡೆದ ದೈವಜ್ಞ ಬ್ರಾಹ್ಮಣ ಸಮಾಜದ ಸಭೆಯಲ್ಲಿ ಪಾಲ್ಗೊಂಡು, ಸಭಿಕರನ್ನು ಉದ್ದೇಶಿಸಿ ಮಾತನಾಡಿದೆನು.
ಕಳೆದ ಇಪ್ಪತ್ತು ವರ್ಷಗಳಿಂದ ಜನಾಶಿರ್ವಾದದೊಂದಿಗೆ ಜಿಲ್ಲೆಯಲ್ಲಿ ನಡೆಸಿದ ಅಭಿವೃದ್ಧಿ ಕೆಲಸಗಳು ಮತ್ತು ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದಲ್ಲಿ ದೇಶದಲ್ಲಾದ ಬದಲಾವಣೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಸಭಿಕರು, ಮುಂದೆಯೂ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವ ಭರವಸೆ ನೀಡಿದರು.
ಸಭೆಯಲ್ಲಿ ಶಾಸಕರಾದ Mahesh Tenginkai , ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ವಿಜಯ ವರ್ಣೇಕರ್, ಸಮಾಜದ ಮುಖಂಡರು ಶ್ರೀ ಜವಾಡಕರ ದಂಪತಿಗಳು,ಶ್ರೀ ವಿಷ್ಣು ರಾಯ್ಕರ್, ಶ್ರೀಮತಿ ಶೈಲಾ ಶೇಟ್, ಶ್ರೀ ರಘು ವರ್ಣೇಕರ್ ಹಾಗು ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.